ದೆಹಲಿ: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ತೆರಳಿದ್ದ ಕೆ.ಎಸ್ ಈಶ್ವರಪ್ಪ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ರಾಜಕಾರಣ ಹೇಗೆ ಬದಲಾಗುತ್ತೆ ಅಂತಾ ಕಾದು ನೋಡಿ, ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು,ಡಿ.ಕೆ. ಶಿವಕುಮಾರ್ ಅರೆಸ್ಟ್ ಆಗಬಹುದು ಅಥವಾ ಸರ್ಕಾರವೇ ಬಿದ್ದು ಹೋಗಬಹುದು ಈಗ ನಾವು ಸಮ್ಮಿಶ್ರ ಸರ್ಕಾರವನ್ನು ನಾವು ಅಸ್ಥಿರಗೊಳಿಸಬೇಕಾದ ಅಗತ್ಯ ಇಲ್ಲ. ಅದು ಕಾಂಗ್ರೆಸ್ ಕಿತ್ತಾಟದಿಂದಲೇ ಬಿದ್ದು ಹೋಗಲಿದೆ ಎಂದಿದ್ದಾರೆ.










