ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡಬೇಡಿ, ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಜಿಗ್ನೇಶ್ ಮೇವಾನಿ

1055

ಚಿಕ್ಕಮಗಳೂರು : ಮೋದಿಯವರು ಈ ದೇಶಧ ಪ್ರಧಾನಿ ಮಂತ್ರಿಆದ ನಂತರಅವರ ಆಡಳಿತವನ್ನು ನೋಡಿದ್ದೀವಿ. ಒಂದು ವಿಚಾರ ಸ್ಫಷ್ಟವಾಗಬೇಕು. ಫ್ಯಾಸಿಸಂಗಿಂತ ದೊಡ್ಡ ಶತ್ರುಇಲ್ಲ  ಎಂದು ಜನನಾಯಕರೂ ಆದ ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹೇಳಿದರು. ಅವರು ಶುಕ್ರವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಕುವೆಂಪು ವೇದಿಕೆಯಲ್ಲಿ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ಸಮ್ಮಿಲನ ಸಂಘರ್ಷ ಮತ್ತು ಹಿಂದಣ ನೋಟ ಕಾರ್ಯಕ್ರಮದ ಸಮಾರೋಪವನ್ನು ಉಧ್ಗಾಟಿಸಿ ಮಾತನಾಡಿದರು. ಮಾತನಾಡಿದರು. ಎಲ್ಲಾ ರಾಜಕೀಯ ಪಕ್ಷಗಳು ಆ ಕಾಲದಿಂದ ಇಲ್ಲಿಯವರೆಗೆ ನಮ್ಮನ್ನು ಶೋಷಣೆ ಮಾಡಿದ್ದಾರೆ. ಆಧರೆ ನಮ್ಮದೊಡ್ಡ ಶತ್ರು ಫ್ಯಾಸಿಸಂ.ಹಾಗಾಗಿ ಕರ್ನಾಟಕದಲ್ಲಿ, ಮಧ್ಯಪ್ರಧೇಶದಲ್ಲಿ, ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತೇನೆ. ನನ್ನ ಪ್ರಚಾರದಿಂದ ಯಾರಿಗೆ ನ್ಯಾಯ ಸಿಗುತ್ತದೆ ಎಂಬುದು ಮುಖ್ಯವಲ್ಲ. ಬದಲಿಗೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ಸೋಲಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ನೋ ಜಾಬ್ ನೋ ವೋಟ್ ಆಂದೋಲನ ಇದನ್ನು ಗುಜರಾತ್ ಗೆತೆಗೆದುಕೊಂಡು ಹೋಗಬೇಕು. 2019ರ ಲೋಕಸಭಾ ಚುನಾವಣೆಗೆ ನಾವು ಫ್ಯಾಸಿಸಂ ಅನ್ನು ಸೋಲಿಸಲೇಬೇಕು ಎಂದು ನುಡಿದುರು. ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ ಎನ್ನುತ್ತಾರೆ. ಅದು ಆಗಬಾರದು. ಬದಲಿಗೆ ಕರ್ನಾಟಕದಲ್ಲಿನ ಬಾಬಾಬುಡಾನ್  ಮತ್ತು ದತ್ತಾತ್ರೆಯರ ಸೌಹಾರ್ದತೆಯನ್ನು ಗುಜರಾತ್‍ನಲ್ಲಿ ನೆಲೆಗೊಳ್ಳುವಂತೆ ಮಾಡಬೇಕಿದೆ. ನಾಳೆಯಿಂದ ಕರ್ನಾಟಕಕ್ಕೆ ಕೋಮುವಾದಿ ರಾಜಕಾರಣದ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರು ಕೋಮು ವಾಂತಿ ಮಾಡುತ್ತಾರೆ. ಆದರೆ ಕರ್ನಾಟಕದ ನಾಗರೀಕ ಸಮಾಜ ಎಚ್ಚೆತ್ತಿದೆ. ಪ್ರಯತ್ನಶೀಲರಾಗಿದ್ದಾರೆ ಹಾಗಾಗಿ ನನಗೆ ನಂಬಿಕೆ ಇದೆಕರ್ನಾಟಕಗುಜರಾತ್ ಆಗುವುದಿಲ್ಲ, ಕರ್ನಾಟಕ ಕರ್ನಾಟಕವಾಗಿಯೇ ಉಳಿದುಕೊಳ್ಳುತ್ತದೆ.

ಕೆ.ಎಲ್.ಅಶೋಕ್ ಮಾತನಾಡಿ, ಕೋಮುವಾದ ಪ್ರಜಾಪ್ರಭುತ್ವದ ಮೇಲೆ, ಮಾನವೀಯತೆಯ ಮೇಲೆ ಯಾರು ಎಷ್ಟು ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಾರೆ ಎಂಬ ವಿಚಾರದಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅನಂತ ಕುಮಾರ ಹೆಗಡೆಯಂಥವರ ನಡುವೆ ಸ್ಪರ್ಧೆ ನಡೆಯುತ್ತಿವೆ. ಇಂತಾ ಸಂಕೀರ್ಣ, ವೈವಿಧ್ಯಮಯ ದೇಶವನ್ನು ಕೋಮುವಾದಿ ಅಜೆಂಡಾಕ್ಕೆ ಬಗ್ಗಿಸಿ, ಒಗ್ಗಿಸಿ ನರಹತ್ಯೆಗೆ ಸಿದ್ಧಗೊಳಿಸುತ್ತಿರುವುದು ಆತಂಕದಾಯಕ ಎಂದರು. ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಜನರ ಎದುರೇ ಅಮಾಯಕರನ್ನು ಬೇಟೆಯಾಡಿ ಕೊಲ್ಲುತ್ತಿರುವುದು ಸಾಮೂಹಿಕ ನರಮೇಧವಲ್ಲದೇ ಇನ್ನೇನು? ಅಖ್ಲಾಕ್, ಜುನೈದ್‍ರ ಹತ್ಯೆಗಳ ಸಂದರ್ಭದಲ್ಲಿ ಆ ನೂರಾರು ಮಂದಿ ಮೌನವಾಗಿ ನಿಂತಿರುವುದು ಗುಂಪು ನ್ಯಾಯದ ಮುಂದೆ ಏನೂ ಮಾಡಲಾಗದ ಅಸಹಾಯಕತೆಯಿಂದಲೋ ಅಥವಾ ಅವರದ್ದೂ ಸಮ್ಮತಿಯಿದೆಯೋ ಎಂದು ಪ್ರಶ್ನಿಸಿದರು.

ಪ್ರಗತಿಪರ ಚಿಂತಕ ನೂರ್ ಶ್ರೀಧರ್ ಮಾತನಾಡಿ, ನನ್ನಪ್ರಕಾರ ಕರ್ನಾಟಕದಲ್ಲಿ ಒಳ್ಳೆಯ ಸಂದರ್ಭ ಇದೆ. ಪರ್ಯಾಯ ಶಕ್ತಿಗಳು ಅಧಿಕಾರಕ್ಕೆ ಬರಬೇಕು, ಕೋಮುವಾದಿಗಳು ಸೋಲಬೇಕು. ಜಾತ್ಯಾತೀತ ಶಕ್ತಿಗಳು ಯಾವುದೇ ಕಾರಣಕ್ಕೂ ಡಿವೈಡ್ ಆಗಬಾರದು. ಪರ್ಯಾಯ ಶಕ್ತಿಗಳೆಲ್ಲ ಒಗ್ಗೂಡಿ ಮೈತ್ರಿಕೂಟ ಮಾಡಿಕೊಳ್ಳಬೇಕು. ಈ ರೀತಿ ಪರ್ಯಾಯದಲ್ಲಿರವವರಿಗೆ ಒಂದು ಮನವಿ. ಅವರ ಕರ್ತವ್ಯ ಬೇಧಭಾವವನ್ನು ಬಿಟ್ಟು ಫ್ಯಾಸಿಸಂ ಬರುತ್ತಿರುವ ಸಂದರ್ಭದಲ್ಲಿ ಒಂದಾಗ ಬರಬೇಕು ಎಂದು ತಿಳಿಸಿದರು.

ಈ ಸಮಯದಲ್ಲಿ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ವಾತಾಭಾರತಿ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ, ಕೆ.ಎಸ್.ಅಶೋಕ್, ಸುರೇಶ್ ಭಟ್ ಬಾಕ್ರಾಬೈಲ್, ಯೂಸುಪ್ ಹಾಜಿ, ಗೌಸ್ ಮೊಹಿದ್ದೀನ್, ಕಲ್ಕುಳಿ ವಿಠಲ ಹೆಗ್ಡೆ, ನೂರ್ ಶ್ರೀಧರ್, ಎನ್.ವೆಂಕಟೇಶ್, ಪ್ರಗತಿಪರ ಚಿಂತಕರ ವೇದಿಕೆ ಶ್ರೀನಿವಾಸ್, ದಲಿತ ದಮಿನಿತ ಅಲ್ಪಸಂಖ್ಯಾತ ಹೋರಾಟ ಸಮಿತಿ ಭಾಸ್ಕರರಾವ, ವಸಂತಕುಮಾರ್ ರಾಜು ಮತ್ತಿತರರಿದ್ದರು.