ಕೆಪಿಸಿಸಿ ಹೆಚ್ಚುವರಿ ಪದಾಧಿಕಾರಿಗಳ ಪಟ್ಟಿಗೆ ರಾಹುಲ್ ಗಾಂಧಿ ಸಹಿ

416

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸ್ತಿರೋದ್ರಿಂದ ಚುನಾವಣೆಗಾಗಿ ಕಾಂಗ್ರೆಸ್ ತನ್ನ ತಂಡವನ್ನು ರೆಡಿ ಮಾಡಿಕೊಳ್ತಿದೆ. ಪಕ್ಷ ಸಂಘಟನೆಯ ಭಾಗವಾಗಿ ಕಾರ್ಯಕಾರಿ ಸಮಿತಿಗೆ 110 ಸದಸ್ಯರನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಕೊಂಡಿದೆ. ಇದರಲ್ಲಿ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ನೂತನ ಅಧ್ಯಕ್ಷರೂ ಸೇರಿದ್ದಾರೆ. ಚುನಾವಣೆ ಸನಿಹ ಪಕ್ಷ ಬಲವರ್ಧನೆಗೆ ಆದ್ಯತೆ ನೀಡಿರೋ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ನೇತೃತ್ವದ ಕೈ ಪಾಳಯಕ್ಕೆ ಎಐಸಿಸಿ ಮತ್ತಷ್ಟು ಬಲ ತುಂಬಿದೆ. 110 ಪದಾಧಿಕಾರಿಗಳ ಹೊಸ ಪಟ್ಟಿಗೆ ರಾಹುಲ್ ಗಾಂಧಿ ಸಹಿ ಹಾಕಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ವಿ.ಆರ್.ಸುದರ್ಶನ್, ಮಂಜುನಾಥ ಬಂಡಾರಿ ಹಾಗೂ ವೆಂಕಟಮುನಿಯಪ್ಪ ಅವರನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 16 ಮಂದಿ ಪ್ರಧಾನ ಕಾರ್ಯದರ್ಶಿಗಳು, 78 ಮಂದಿ ಕಾರ್ಯದರ್ಶಿಗಳು ಹಾಗೂ 11 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ನೇಮಕಗೊಳಿಸಲಾಗಿದೆ. ಮಂಡ್ಯ ಕಾಂಗ್ರೆಸ್ ಪಾಳೆಯದ ವಿವಾದಕ್ಕೆ ತೆರೆ ಹಾಕುವ ಸಲುವಾಗಿ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಮಂಡ್ಯ ಜಿಲ್ಲಾಧ್ಯಕ್ಷರಾಗಿ ಸಿ.ಡಿ.ಗಂಗಾಧರ್, ಹಾಸನ ಜಿಲ್ಲಾಧ್ಯಕ್ಷರಾಗಿ ಜಾವಗಲ್ ಮಂಜುನಾಥ್ ರವರನ್ನ ನೇಮಿಸಲಾಗಿದೆ.