ಪರೀಕ್ಷಾ ಪೇ ಚರ್ಚಾ: ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಪ್ರಧಾನಿ ನರೇಂದ್ರ ಮೋದಿ…

254
firstsuddi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  ಇಂದು  ತಾಲ್‌ಕೊಟೋರಾ ಮೈದಾನದಲ್ಲಿ ವಿದ್ಯಾರ್ಥಿಗಳೊಂದಿಗೆ ‘ಪರೀಕ್ಷಾ ಪೇ ಚರ್ಚಾ 2.0’ ಕಾರ್ಯಕ್ರಮ ನಡೆಸಿದರು. 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಿದ್ದು,  ಚರ್ಚೆಯಲ್ಲಿ  2000 ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗಿಯಾಗಿದ್ದರು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರೀಕ್ಷೆ ದೊಡ್ಡ ಸವಾಲು ಅಲ್ಲ. ಜೀವನ ಪರೀಕ್ಷೆಗಿಂತ ಮಿಗಿಲಾದುದು. ಪೋಷಕರು ನಿಮ್ಮ ಆಸೆ, ಆಕಾಂಶೆಗಳನ್ನು ಮಕ್ಕಳ ಮೇಲೆ ಹೇರಬೇಡಿ. ಪರೀಕ್ಷಾ ಸಮಯದಲ್ಲಿ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರದೆ ಅವರಿಗೆ ಸಹಕರಿಸಲು ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರು. ಈ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಯೂಟ್ಯೂಬ್‌,ರೇಡಿಯೋ, ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ  ಪ್ರಸಾರವಾಗಲಿದೆ.