ಬೆಂಗಳೂರು:ಕನ್ನಡದ ಯುವನಟ ಯೋಗಿ ತಮಿಳಿನ ‘ಪಾರ್ತಿಬನ್ ಕಾದಲ್’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈಯಲೇ ಬಿಡುಗಡೆಯಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಬಳಿಕ ಯೋಗಿಯವರನ್ನು ಸುತ್ತುವರಿದ ತಮಿಳುನಾಡಿನ ಪತ್ರಕರ್ತರು ನೇರವಾಗಿ ಕಾವೇರಿ ನೀರು ವಿವಾದ ಹಾಗೂ ನೆಚ್ಚಿನ ನಟನ ಕುರಿತಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟ ಯೋಗಿ ಕನ್ನಡಿಗರಿಗೇ ನೀರಿಲ್ಲ ಅಲ್ಲಿ ಮಂಡ್ಯ ಎಂಬ ಊರಿದೆ. ಅಲ್ಲಿನ ಜನರು ನೀರಿಗೆ ಯಾವ ರೀತಿ ಕಷ್ಟ ಪಡುತ್ತಾರೆ ಎಂದು ನೀವೇ ನೋಡಿ ಎಂದಿದ್ದಾರೆ. ಇದಾದ ಮರುಕ್ಷಣವೇ ಪತ್ರಕರ್ತರು ನಿಮಗೆ ರಾಜ್ ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಇಷ್ಟನೋ ಎಂಬ ಪ್ರಶ್ನೆಕೇಳಿದ್ದು ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದಾರೆ. ಈ ರೀತಿ ಮಾತನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ದಿ ಮಾತು ಹೇಳಿ ಯೋಗಿಯನ್ನು ‘ಪಾರ್ತಿಬನ್ ಕಾದಲ್’ ಸಿನಿಮಾದಿಂದ ಹೊರದಬ್ಬಿದ್ದಾರೆ ಎನ್ನಲಾಗಿದೆ.