ಮೂಡಿಗೆರೆ: ಬಸ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಕೂಡಲೇ ವಿದ್ಯುತ್ ಕಂಬದ ಫ್ಯೂಸ್ ಹಾರಿ ಹೋಗಿದ್ರಿಂದ ಭಾರೀ ಅನಾಹುತವೊಂದು ಪವಾಡ ಸದೃಷದಂತೆ ಪಾರಾದ ಘಟನೆ ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಇಂದು ಬೆಳಗ್ಗೆ ಕೆ.ಕೆ.ಬಿ ಕಂಪನಿಗೆ ಸೇರಿದ ಬಸ್ ಮೂಡಿಗೆರೆ-ಬಾಳೆಹೊನ್ನೂರು ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಬಸ್ ಗೆ ದನಕರುಗಳು ಅಡ್ಡ ಬಂದಿವೆ. ಈ ವೇಳೆ ಬಸ್ ಚಾಲಕ ಗೋವುಗಳನ್ನ ರಕ್ಷಿಸಲು ಮುಂದಾದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಈ ವೇಳೆ, ಬಸ್ ರಸ್ತೆ ಪಕ್ಕದಲ್ಲಿದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಅದೇ ವಿದ್ಯುತ್ ಕಂಬ ಮುರಿದು ಬಸ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಡಿಕ್ಕಿಯಾದ ಕೂಡಲೇ ಲೈಟ್ ಕಂಬದ ಫ್ಯೂಸ್ ಹಾರಿದ್ರಿಂದ ಭಾರೀ ಅನಾಹುತವೊಂದು ತಪ್ಪಿದೆ. ಬಸ್ ನಲ್ಲಿ ೧೫ ಕ್ಕೂ ಹೆಚ್ಚು ಜನ ಪ್ರಯಾಣಿಸ್ತಿದ್ರು. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಯಾರಿಗೂ ತೊಂದರೆಯಾಗಿಲ್ಲ.