ಪುತ್ರಿಯಿಂದಲೇ ದುನಿಯಾ ವಿಜಯ್ ವಿರುದ್ಧ ದೂರು ದಾಖಲು …

376
firstsuddi

ಬೆಂಗಳೂರು : ದುನಿಯಾ ವಿಜಯ್ ವಿರುದ್ಧ ಅವರ ಮಗಳೇ ದೂರು ನೀಡಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪುತ್ರಿ ಮೋನಿಕಾ ನಿನ್ನೆ ವೈಯಕ್ತಿಕ ವಸ್ತುಗಳನ್ನು ತರಲು ಕೀರ್ತಿಗೌಡ ಮನೆಗೆ ತೆರಳಿದ್ದಾಗ ತನ್ನ ತಂದೆ ವಿಜಯ್, ಕೀರ್ತಿಗೌಡ ಸೇರಿದಂತೆ ಐವರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಅಲ್ಲದೇ ತನ್ನ ಮೇಲೆ ಹಲ್ಲೆ ಮಾಡಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪುತ್ರಿ ಮೋನಿಕಾ ದೂರಿನಲ್ಲಿ ಆರೋಪಿಸಿದ್ದಾರೆ. ತಂದೆ ದುನಿಯಾ ವಿಜಯ್, ಚಿಕ್ಕಮ್ಮ ಕೀರ್ತಿ ಗೌಡ ಸೇರಿದಂತೆ ಐದು ಜನರ ವಿರುದ್ಧ ದೂರು ದಾಖಲಾಗಿದೆ.