ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ: ಇನ್ನೂ ಪತ್ತೆಯಾಗಿಲ್ಲ ನಾಗರತ್ನ…

287
firstsuddi

ಬೆಂಗಳೂರು :ನಟ ದುನಿಯಾ ವಿಜಯ್ ಅವರು ಜೈಲಿನಲ್ಲಿದ್ದಾಗ ನಾಗರತ್ನರವರು ಕೀರ್ತಿಗೌಡ ಅವರ ಮನೆಗೆ ತೆರಳಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ನಿನ್ನೆ ಹಲ್ಲೆ ಮಾಡಿದ ಸಿಸಿ ಕ್ಯಾಮರಾ ಫೂಟೇಜ್ ಹೊರಬಿದ್ದ ಬೆನ್ನಲ್ಲೇ ನಾಗರತ್ನ ನಾಪತ್ತೆಯಾಗಿದ್ದಾರೆ. ಕೀರ್ತಿಗೌಡ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಗರತ್ನ ಅವರನ್ನು ಹುಡುಕುತ್ತಿದ್ದು, ಈ ಹಿನ್ನೆಲೆ ನಾಗರತ್ನಅವರು ವಕೀಲರೊಂದಿಗೆ ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.