ಬಾಗಲಕೋಟೆ: ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪರವರು ಸಿದ್ದರಾಮಯ್ಯ ಅವರು ದನದ ಮಾಂಸ ತಿಂತಾರೋ, ಎಮ್ಮೆ ಮಾಂಸ ತಿಂತಾರೋ ಅವರಿಗೆ ಬಿಟ್ಟಿದ್ದು ಆದರೆ ಮನುಷ್ಯರು ತಿನ್ನೋದನ್ನು ತಿನ್ನಲಿ. ಉಪಮುಖ್ಯಮಂತ್ರಿ ಪರಮೇಶ್ವರ್ ರಾಹು, ದೇವೇಗೌಡ ಶನಿ, ರೇವಣ್ಣ ಕೇತು, ಎಲ್ಲರನ್ನೂ ಕಟ್ಟಿಕೊಂಡು ಸಿದ್ದರಾಮಯ್ಯ ಹೊರಟಿದ್ದಾರೆ.ರಾಜಕಾರಣದಲ್ಲಿ ಇವರು ಯಾವಾಗ ಸಾಯುತ್ತಾರೊ ಗೊತ್ತಿಲ್ಲ. ಎಚ್.ಡಿ.ದೇವೆಗೌಡರ ಬೆನ್ನಿಗೆ ಸಿದ್ದರಾಮಯ್ಯನವರು ಚಾಕು ಹಿಡಿದು ನಿಂತಿದ್ದಾರೆ. ಸಿದ್ದರಾಮಯ್ಯರವರ ಬೆನ್ನಿಗೆ ಕುಮಾರಸ್ವಾಮಿ ಅವರು ಚಾಕು ಹಿಡಿದು ನಿಂತಿದ್ದಾರೆ. ಯಡಿಯೂರಪ್ಪ ನವರು ಸಿಎಂ ಆಗುತ್ತಾರೆಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕೆ ಮಾಡುತ್ತಾರೆ. ಆದರೆ ನಾನೆ ಮುಖ್ಯಮಂತ್ರಿ ಎಂದು ಹಗಲು ಕನಸು ಕಾಣುತ್ತಿರುವುದು ಸಿದ್ದರಾಮಯ್ಯ.ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದಿಲ್ಲ ಎಂದಿದ್ದಾರೆ.










