ಲವ್ ಮಾಡು ಎಂದು ಅಪ್ರಾಪ್ತ ತಂಗಿಯನ್ನು ಪೀಡಿಸುತ್ತಿದ್ದ ಅಣ್ಣ…

754

ತುಮಕೂರು: ಪ್ರೀತಿ ಮಾಡುವಂತೆ ಸೋದರಿಯನ್ನು ಆಕೆಯ ದೊಡ್ಡಪ್ಪನ ಮಗನೇ ಪೀಡಿಸುತ್ತಿದ್ದ ಘಟನೆವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದ್ದು,  ರಮೇಶ್ ಎಂಬಾತ ತನ್ನ ಅಪ್ರಾಪ್ತ ಸಹೋದರಿಯನ್ನು ಲವ್ ಮಾಡು ಎಂದು ಪೀಡಿಸುತ್ತಿದ್ದು, ಪ್ರೀತಿಸದಿದ್ದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಕಿ ತನ್ನ ಸಹೋದರನನ್ನು ಪ್ರೀತಿಸಲು ನಿರಾಕರಿಸಿದ್ದಕ್ಕೆ ತಂಗಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.