ಡಿಕೆಶಿ ವಿರುದ್ಧ ಎಫ್​ಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯ…

631
firstsuddi

ನವದೆಹಲಿ: ಅಕ್ರಮ ಆದಾಯಗಳಿಕೆ ಸಂಬಂಧಿಸಿದಂತೆ ​ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿ ಎಫ್​ಐಆರ್ ದಾಖಲಿಸಿದ್ದು, ಡಿಕೆಶಿಗೆ ಮತ್ತೆ ಬಂಧನ ಭೀತಿ ಎದುರಾಗಿದ್ದು, ಎಫ್​ಐಆರ್​ನಲ್ಲಿ ಡಿಕೆಶಿ ಹೊರತು ಪಡಿಸಿ, ಕರ್ನಾಟಕ ಭವನದ ಮಾಜಿ ಸಿಬ್ಬಂದಿ ರಾಜೇಂದ್ರನ್​ ಮತ್ತು ದೆಹಲಿ ಕರ್ನಾಟಕ ಭವನದ ಆಂಜನೇಯ ಹನುಮಂತ್ ಮೇಲೂ ಕೂಡ ಎಫ್ಐಆರ್ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ(ಸೆ.15) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದರಿಂದ ನಿರಾಳರಾಗಿದ್ದ ಡಿಕೆ ಶಿವಕುಮಾರ್ ಈಗ ಮತ್ತೆ ಬಂಧನ ಬಂಧನ ಭೀತಿ ಎದುರಾಗಿದೆ.