ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗಲ್ಲ.- ಎಚ್.ಸಿ ಮಹದೇವಪ್ಪ.

330
firstsuddi

ಮೈಸೂರು: ಚುನಾವಣೆ ಸೋಲಿನ ಬಳಿಕ ದಿಗ್ಭ್ರಾಂತನಾಗಿದ್ದ ನಾನು, ನೋವಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು. ಅನಾರೋಗ್ಯದ ಕಾರಣ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದ ಕಾರಣ ಸಭೆ ಸಮಾರಂಭಗಳಲ್ಲಿ ಭಾಗಿಯಾಗಲು ಆಗಿರಲಿಲ್ಲ. ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಸ್ನೇಹ ಹಳಸಿದೆ ಅಂತಾ ಹೇಳಿದವರು ಯಾರು? ಸಿದ್ದರಾಮಯ್ಯನವರೇನಾದ್ರು ಹೇಳಿದ್ದಾರಾ? ನಾವು ಚೆನ್ನಾಗಿಯೇ ಇದ್ದೇವೆ. ಸಿದ್ದರಾಮಯ್ಯ ಹಾಗೂ ನನ್ನ ನಡುವಿನ ಗೆಳೆತನ ಹಳಸಿದೆ ಎಂಬ ಸುದ್ದಿಗೆ ವಲಸಿಗರೇ ಕಾರಣ.ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಕಾಂಗ್ರೆಸ್ ನಲ್ಲೇ ಇರುವೆ, ಅಲ್ಲೇ ನನ್ನ ರಾಜಕೀಯ ಜೀವನ ಅಂತ್ಯವಾಗಲಿದೆ. ನನ್ನ ಮೃತದೇಹ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.