ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹಕ್ಕಾಗಿ ಬೆಳಗ್ಗೆಯಿಂದ ನೀರಿನಲ್ಲಿ ಶೋಧ ನಡೆಸುತ್ತಿರುವ ಎನ್.ಡಿ.ಆರ್.ಎಫ್ ತಂಡ.

401

ಚಿಕ್ಕಮಗಳೂರು- ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ 24 ವರ್ಷದ ಅಶೋಕ್ ಸೇತುವೆ ಮೇಲೆ ಸಂಚರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಶಂಕಿಸಲಾಗಿದ್ದು ಬೈಕನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುವಾಗ ಅಶೋಕ್ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದು ಆತನ ಮೃತದೇಹಕ್ಕಾಗಿ ಬೆಳಗ್ಗೆಯಿಂದ 30 ಜನರ ಎನ್.ಡಿ.ಆರ್.ಎಫ್ ತಂಡ ನೀರಿನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು ಕೊಚ್ಚಿ ಹೋಗಿ ಎರಡು ದಿನ ಕಳೆದರು ಮೃತದೇಹ ಪತ್ತೆಯಾಗಿಲ್ಲ. ಎನ್.ಡಿ.ಆರ್.ಎಫ್ ತಂಡಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿಗಳು ಸಾಥ್ ನೀಡಿದ್ದು ಮೃತದೇಹಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.