ಬೆಂಗಳೂರು-ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗಿದ್ದು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ಪ್ರತಿಭಟನೆಯನ್ನು ಮಾಡಿದ್ದು ವಿಧಾನಸೌಧ ಮುತ್ತಿಗೆಗೆ ರೈತರು ತೆರಳುತ್ತಿದ್ದ ಪರಿಣಾಮ ಶೇಷದ್ರಿ ರಸ್ತೆ ಸಂಚಾರ ಬಂದ್ ಆಗಿದ್ದು, ಪೊಲೀಸರು ಮೌರ್ಯ ಸರ್ಕಲ್ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ.