ಜಾನಪದ ಗೀತೆಗಳಲ್ಲಿ ನೈತಿಕ ಬದುಕನ್ನು ಕಾಣಬಹುದಾಗಿದೆ :ಬಕ್ಕಿ ಮಂಜುನಾಥ್…

394
firstsuddi

ಕಳಸ: ಚಿತ್ರಗೀತೆಗಳಲ್ಲಿ ನೈತಿಕ ಬದುಕಿಲ್ಲ.ಆದರೆ ಜಾನಪದಗಳಲ್ಲಿ ನೈತಿಕ ಬದುಕನ್ನು ಕಾಣಬಹುದಾಗಿದೆ ಎಂದು ತಾಲ್ಲೂಕು ಕನ್ನಡ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಹೇಳಿದರು.ಕಳಸದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಮತ್ತು ಕಳಸ ಹೋಬಳಿ ಕನ್ನಡ ಜಾನಪದ ಪರಿಷತ್ ಆಯೋಜಿಸಲಾಗಿದ್ದ ಸುಗ್ಗಿಯ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇವಲ ಹಾಡುಗಳ ಮೂಲಕ ಮಾತ್ರ ಜಾನಪದ ಬಳಸುವುದಲ್ಲದೆ ಕಳಲೆ,ಕೆಸ,ಏಡಿ ಮುಂತಾದ ಖಾದ್ಯಗಳ ಮೂಲಕವೂ ಜಾನಪದದ ಸೊಗಡನ್ನು ಕಾಣುತ್ತಿದ್ದೇವೆ.ಸಾಹಿತ್ಯ,ಸಂಸ್ಕೃತಿ ಮತ್ತು ಪರಂಪರೆ ಪಾಶ್ಚತ್ಯದೆಡೆಗೆ ವಾಲೂತ್ತಿರುವ ಇಂದಿನ ಜನಾಂಗದಿಂದ ಜಾನಪದ ನಶಿಸಿ ಹೋಗುತ್ತಿದೆ.ಅದನ್ನು ಉಳಿಸಿಕೊಂಡು ಹೋಗಲು ಈ ರೀತಿಯ ಕಾರ್ಯಕ್ರಮಗಳನ್ನು ಮಾಡಿ ಜಾಗೃತಿ ಮುಟ್ಟಿಸುವ ಕಾರ್ಯಕ್ರಮವನ್ನು ಜಾನಪದ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಹೇಳಿದರು.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನರೇಂದ್ರ ಕಲ್ಲಾನೆ ಮಾತನಾಡಿ ಮರೆಯಾಗುತ್ತಿರುವ ಜಾನಪದ ಕಲೆ ಮತ್ತು ಜಾನಪದ ಸೊಗಡನ್ನು ಮುಂದಿನ ಪೀಳಿಗೆಗೆ ಉಳಿಸುವ ಮಹತ್ತರ ಜವಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ಜಾನಪದ ಎಂದರೆ ನಮ್ಮ ಭಾಷೆ,ಪ್ರತಿನಿತ್ಯದ ನಮ್ಮ ಮಾತು.ಹಿಂದಿನ ಕಾಲದಲ್ಲಿ ಹೊಲಗಳಲ್ಲಿ ಕೆಲಸ ಮಾಡುವಾಗ ಅಥವಾ ಮನೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡುವಾಗ ಒತ್ತಡವನ್ನು ದೂರ ಮಾಡಲು ಆಡು ಭಾಷೆಯಲ್ಲಿ ಪದಗಳನ್ನು ಹಾಡುತ್ತಿದ್ದರು.ಅವರು ಹಾಡುತ್ತಿದ್ದ ಪದಗಳಲ್ಲಿ ಅರ್ಥ ಅಡಗಿರುತ್ತಿತ್ತು. ಆದರೆ ಇವತ್ತು ಅದೆಲ್ಲ ಮರೆಯಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹೊಬಳಿ ಅಧ್ಯಕ್ಷ ಕಿರಣ್ ಶೆಟ್ಟಿ,ಕಾರ್ಯದರ್ಶಿ ಸುದೀಶ್ ಸುವರ್ಣ,ಶಾಲಾ ಉಪನ್ಯಾಸಕ ಅರುಣ್ ಕುಮಾರ್,ಶಿವರಾಮ ಪಂಡಿತ್,ಶಿವಾನಂದ ಇತರರು ಇದ್ದರು.