ಚಿಕ್ಕಮಗಳೂರು : ಜನಪದ ಸಾಹಿತ್ಯ ಅದು ಕೇವಲ ಕಲೆಯಾಗಿ ಮಾತ್ರ ಉಳಿದಿಲ್ಲ ಅದು ಒಂದು ವಿಶಿಷ್ಠವಾದ ಸಂಸ್ಸøತಿಯನ್ನು ನಮಗೆ ಪರಿಚಯಿಸುತ್ತದೆ. ಇದರಲ್ಲಿ ನಮ್ಮ ಬದುಕಿನ ಅಂತ:ಸತ್ವ ಅಡಗಿದೆ, ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಸೂರಿಶ್ರೀನಿವಾಸ್ ತಿಳಿಸಿದರು.
ಅವರು ಚಿಕ್ಕಮಗಳೂರು ಪವಿತ್ರವನ ಬಳಿಯ ಸಿದ್ದರಾಮೇಶ್ವರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಹೋಬಳಿ ಮತ್ತು ತಾಲ್ಲೂಕು, ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಸುಗ್ಗಿಹಬ್ಬದಲ್ಲಿ ಜಾನಪದ ಸಂಭ್ರಮ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ ಗ್ರಾಮೀಣ ಸಂಸ್ಕøತಿಯನ್ನು ನಗರ, ಪಟ್ಟಣಗಳಲ್ಲಿ ಕಾಣಸಿಗುವುದಿಲ್ಲ, ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಜನಪದ ಸಾಹಿತ್ಯ, ನಾಟಿ ಔಷಧ, ಅಸಾದಿ ಪದಗಳು, ತೊಗಲೆÀ ಗೊಂಬೆಯಾಟ, ವೀರಗಾಸೆ, ಡೊಳ್ಳುಕುಣಿತ ಅಂಟಿಕೆ-ಪಿಂಟಿಕೆ ತತ್ವಪದಗಳು, ಭಜನೆ, ಈ ಕಲೆಗಳು ಯಾವಾಗಲೂ ಉಳಿಯಬೇಕು, ಎಂದು ತಿಳಿಸಿದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ ಗೌರವಾಧ್ಯಕ್ಷ ಹೆಚ್. ಸಿ. ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅನಕ್ಷರಸ್ಥರು ತಮ್ಮ ಶ್ರಮವನ್ನು ಮರೆಯುವ ಸಲುವಾಗಿ ಕೃಷಿ ಚಟುವಟಿಕೆ ಹಾಗೂ ವಕ್ಕಲು ತನಗಳಲ್ಲಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು, ಅವು ಬಾಯಿಂದ ಬಾಯಿಗೆ ಹರಿದಾಡುತ್ತಾ ಸಾವಿರಾರು ಜನಪದ ಗೀತೆಗಳನ್ನು ಹಾಡುವುದನ್ನು ನಮ್ಮ ಗ್ರಾಮೀಣ ಭಾಗದಲ್ಲಿ ಸೋಬಾನೆ, ಪದ, ಬೀಸುವಕಲ್ಲಿನ ಪದ, ತೊಟ್ಟಿಲ ಪದ, ಇವುಗಳು ಈಗಲೂ ಜೀವಂತಿಕೆಯನ್ನು ಪಡೆದುಕೊಂಡಿವೆ, ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಜನಪದ ಪರಿಷತ್ ಅಧ್ಯಕ್ಷ ಬಿ. ಆರ್. ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿದ್ದರಾಮೆಶ್ವರ ಶಿಕ್ಷಣ ಸಂಸ್ಥೆ, ಕಾರ್ಯದರ್ಶಿ ಎಸ್. ಎಸ್. ಚಂದ್ರಶೇಖರ್ ಖಜಾಂಚಿ ಯು. ಬಿ. ಶಾಂತಕುಮಾರ ಸದಸ್ಯರಾದ ಜಯದೇವಪ್ಪ ಕಸಬಾ ಹೋಬಳಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಯೋಗಣ್ಣ ಹಾಗೂ ಶಿಕ್ಷಕರಾದ ಲತಾ, ಶೃತಿ ರಂಜನಿ, ರೇಖಾ ಮಣಿ, ಪಂಕಜ, ಉಪಸ್ಥಿತರಿದ್ದರು.