ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಲಾಗುವುದು.- ಮುಖ್ಯಮಂತ್ರಿ ಕುಮಾರಸ್ವಾಮಿ.

327
firstsuddi

ಮಂಡ್ಯ- ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ರಾಮನಗರದಲ್ಲಿ ನಡೆದ ಜೆ.ಡಿ.ಎಸ್ ಸಮವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳು ಐವತ್ತರಿಂದ ಒಂದು ಲಕ್ಷ ರೂ ಫೀಜ್ ನೀಡಿ ಶಾಲೆಗೆ ಹೋಗುತ್ತಾರೆ ಅವರಿಗೆ ಬಸ್ ಚಾರ್ಜ್ ನೀಡುವುದು ಕಷ್ಟವಾಗುವುದಿಲ್ಲ. ಉಚಿತ ಬಸ್ ಪಾಸ್ ಬೇಕಿದ್ದರೆ ಸರ್ಕಾರಿ ಶಾಲೆಗೆ ಬನ್ನಿ ನಿಮಗೂ ಬಸ್ ಪಾಸ್ ಕೊಡೋಣ ಎಂದು ಪರೋಕ್ಷವಾಗಿ ನುಡಿದಿದ್ದಾರೆ.ಈ ಬಗ್ಗೆ ಮಂಗಳವಾರ ಸಭೆ ಕರೆದು ತಿರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.