ಚಿಕ್ಕಮಗಳೂರು : ಕುವೆಂಪು ವಿಶ್ವ ವಿದ್ಯಾನಿಲಯ ಕೊಡಮಾಡುವ ಪಠ್ಯ ಮತ್ತು ಪಠ್ಯೇತರಕ್ಕೆ ಸಂಬಂಧಿಸಿದ ನಿರಂಕುಶಮತಿ ಪದವಿ ಪುರಸ್ಕಾರ ಅವಾರ್ಡ್‍ಗೆ ಅಜ್ಜಂಪುರ ಎಸ್. ಶೃತಿ ಅವರು ಆಯ್ಕೆಯಾಗಿದ್ದಾರೆ. ಫೆಬ್ರವರಿ 15 ರಂದು ನಡೆಯುವ ಘಟಿಕೋತ್ಸವದಲ್ಲಿ ಈ ಪದವಿ ಪುರಸ್ಕಾರ, ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.
ನಮ್ಮ ಜಿಲ್ಲೆಯ ಸಾಹಿತಿಗಳಾಗಿದ್ದ ಅಜ್ಜಂಪುರ ಜಿ. ಸೂರಿ ಅವರ ಮೊಮ್ಮಗಳಾಗಿರುವ ಮತ್ತು ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತು ಪದ್ಮಾವತಿ ಅವರ ಮಗಳಾಗಿರುವ ಅಜ್ಜಂಪುರ ಎಸ್. ಶೃತಿ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದಿದ್ದು ಹೆಜ್ಜೆಗುರುತು ಎಂಬ ಕವನ ಸಂಕಲನವನ್ನು ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ
ಕರ್ನಾಟಕ ಸರ್ಕಾರ ಆಯೋಜಿಸಿದ್ದ ನವಕರ್ನಾಟಕ 2025 ರ ವಿಷನ್ ಕುರಿತು ಇಂಗ್ಲೀಷ್‍ನಲ್ಲಿ ಬರೆದ ಪ್ರಬಂಧ ಸ್ಪರ್ಧೆಯಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಪ್ರಥಮ ಬಹುಮಾನವನ್ನು ಪಡೆದು ವಿಶ್ವ ವಿದ್ಯಾನಿಲಯದ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ರಾಜ್ಯ ಯುವ ಪ್ರಶಸ್ತಿ, ಬೀದರ್ ದೇಶಪಾಂಡೆ ಪ್ರತಿಷ್ಠಾನ ಕೊಡಮಾಡುವ ರಾಜ್ಯ ಕಲಾನಿರೂಪಕಿ ರತ್ನ ಮತ್ತು ಕಡೂರು ರೋಟರಿ ಕ್ಲಬ್ ಪ್ರತಿಭಾರತ್ನ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿಗಳು ಅಜ್ಜಂಪುರ ಎಸ್. ಶೃತಿ ಅವರಿಗೆ ಲಭಿಸಿವೆ.











