ಮಧ್ಯಪ್ರದೇಶ ಗವರ್ನರ್ ಲಾಲ್‍ಜಿ ಟಂಡನ್ ವಿಧಿವಶ…

128
firstsuddi

ಲಖನೌ : ಮಧ್ಯಪ್ರದೇಶ ಗವರ್ನರ್ ಲಾಲ್‍ಜಿ ಟಂಡನ್(85) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಜೂನ್ 11ರಂದು ಲಖನೌನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದೀರ್ಘ ಕಾಲದ ಚಿಕಿತ್ಸೆ ನೀಡಿದರೂ ಕೂಡಾ ಲಾಲ್‍ಜಿ ಟಂಡನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.