ಬೆಂಗಳೂರು: ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ರಾಜ್ಯಪಾಲರ ಭಾಷಣ ಆರಂಭಕ್ಕೂ ಮುನ್ನವೇ ವಿರೋಧ ಪಕ್ಷ ಬಿಜೆಪಿ ಶಾಸಕರು ಈ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಘೋಷಣೆ ಕೂಗಿ ಗಲಾಟೆ ಆರಂಭಿಸಿದ್ದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಗದ್ದಲದ ನಡುವೆಯೂ ರಾಜ್ಯಪಾಲ ವಜುಭಾಯ್ ವಾಲಾ ಅವರು ಭಾಷಣವನ್ನು ಮುಂದುವರೆಸಿದರು. ಆದರೆ ಬಿಜೆಪಿ ಶಾಸಕರ ಗಲಾಟೆ ಹೆಚ್ಚಾದ ಹಿನ್ನಲೆ ರಾಜ್ಯಪಾಲರು 22 ಪುಟಗಳ ಭಾಷಣದಲ್ಲಿ ಕೇವಲ 2 ಪುಟ ಮಾತ್ರ ಓದಿ ಅಧಿವೇಶನದಿಂದ ನಿರ್ಗಮಿಸಿದ್ದಾರೆ.










