ಗ್ರೀನ್ ಟೀ ನೀವು ಅಂದುಕೊಂಡಷ್ಟು ಒಳ್ಳೆಯದಲ್ಲ…

649

ಒಂದು ಕಾಲದಲ್ಲಿ ಟೀ, ಕಾಫೀ ಸುತ್ತಲು ತಿರುಗುತ್ತಿದ್ದ ಜನ ಈಗ ಮಾರುಕಟ್ಟೆಯಲ್ಲಿ ಸಿಗುವ ಗ್ರೀನ್ ಟೀ ಕಡೆಗೆ ಮುಖ ಮಾಡಿದ್ದಾರೆ. ಯಾರಾದರು ಸ್ನೇಹಿತರ ಬಳಿ ದಪ್ಪ ಇದ್ದೀನಿ ಕೊಲೆಸ್ಟ್ರಾಲ್ ಇದೆ ಎಂದು ಹೇಳಿದರೆ, ಗ್ರೀನ್ ಟೀ ಟ್ರೈ ಮಾಡು ಎಂದು ಉಚಿತ ಸಲಹೆ ನೀಡುತ್ತಾರೆ. ಆದರೆ ಗ್ರೀನ್ ಟೀ ನೀವೂ ಅಂದುಕೊಂಡಷ್ಟು ಒಳ್ಳೆಯದಲ್ಲ. ಅದರಿಂದ ಹಲವು ನಷ್ಟಗಳು ಇದೆ ಅದು ಏನೆಂದರೆ:

• ಅನಿಮಿಯಾ ಎಂದರೆ ರಕ್ತಹೀನತೆ ಗ್ರೀನ್ ಟೀಯನ್ನು ಹೆಚ್ಚಾಗಿ ಸೇವಿಸುವುದರಿಂದ ಐರನ್ ಡೆಫೀಷಿಯನ್ಸಿ ಕಾರಣದಿಂದ ಅನಿಮಿಯಾ ಬರುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ. ಗ್ರೀನ್ ಟೀಯಲ್ಲಿ ಇರುವ ಟ್ಯಾನಿನ್ ದೇಹದಲ್ಲಿನ ಐರನ್ ಕಂಟೆಂಟ್ಸ್ ಅಬ್ಸಾರ್ಬ್ ಮಾಡಿಕೊಳ್ಳಲು ಬಿಡುವುದಿಲ್ಲ. ಇದರಿಂದ ದೇಹದಲ್ಲಿ ಐರನ್ ಡೆಫೀಷಿಯನ್ಸಿ ಉಂಟಾಗುತ್ತದೆ.
• ಹೆಚ್ಚಾಗಿ ಗ್ರೀನ್ ಟೀ ಕುಡಿಯುವುದರಿಂದ ನಮ್ಮ ಹಾರ್ಟ್‍ಬೀಟ್ ರೇಂಜ್ ಬದಲಾವಣೆಯಾಗುವ ಸಾಧ್ಯತೆಗಳು ಇವೆ. ಹಾರ್ಟ್‍ಬೀಟ್ ಹೆಚ್ಚಾಗುವುದರಿಂದ ಅಪಾಯ ಇದೆ.
• ಗ್ರೀನ್ ಟೀಯಲ್ಲಿ ಕೆಫಿನ್ ಪ್ರಮಾಣ ಕಡಿಮೆ ಇದ್ದರು, ದೇಹದಲ್ಲಿ ಆಸಿಡ್ ಪ್ರಮಾಣ ಹೆಚ್ಚಿಸುತ್ತದೆ ಇದರಿಂದ ಆಗಾಗಾ ಹೊಟ್ಟೆನೋವು, ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತದೆ.
• ನಮ್ಮ ದೇಹ 9.9 ಗ್ರಾಂ ಗ್ರೀನ್ ಟೀ ತೆಗೆದುಕೊಂಡರೆ ಶಕ್ತಿ ಉಂಟಾಗುತ್ತದೆ. ಇದರ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ಚಿಕ್ಕ ಚಿಕ್ಕ ಬದಲಾವಣೆಗಳು ಆಗುತ್ತವೆ. ಅದರಲ್ಲಿ ತಲೆ ನೋವು ಒಂದು ಭಾಗ
• ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆದರೆ ಅದರಿಂದ ಟೈಪ್ 2 ಡಯಾಬಿಟಿಸ್ ಬರುವ ಸಾದ್ಯತೆ ಇದೆ.ಇದಕ್ಕೆ ಕಾರಣ ಇದರಲ್ಲಿರುವ ಕಾಟಚಿನ್ಸ್.
• ಗ್ರೀನ್ ಟೀಯನ್ನು ಹೆಚ್ಚಾಗಿ ಸೇವಿಸುವುದರಿಂದ ಅಲರ್ಜಿ ಬರುವ ಸಾಧ್ಯತೆಗಳಿವೆ. ಮುಖ,ನಾಲಿಗೆ,ಗಂಟಲು,ತುಟಿ, ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುಬಹುದು.