- ಸುದೀಶ್ ಸುವರ್ಣ ಕಳಸ.
ಕಳಸ:ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿದ ತೂಗುಸೇತುವೆ ತಜ್ಞ ಗಿರೀಶ್ ಭಾರದ್ವಜ್ ಪದ್ಮ ಪುರಸ್ಕಾರ ಪಡೆದು ರಾಜ್ಯದ ಕೀರ್ತಿಯನ್ನು ಹೆತ್ತಿಹಿಡಿದಿರುವುದು ಸಂತೋಷದ ವಿಷಯವಾದರೆ.ಅದೇ ತೂಗು ಸೇತುವೆಗಳು ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿ ಅವಸಾನದ ಅಂಚಿಗೆ ತುಲುಪುತ್ತಿರುವುದು ಅಷ್ಟೇ ಬೇಸರದ ಸಂಗತಿಯಾಗಿದೆ.
ಕಳಸ ಹೊಬಳಿಯ ಸುತ್ತಮುತ್ತ ಅದೆಷ್ಟೋ ನದಿಗಳು ಹರಿಯುತ್ತಿದ್ದು,ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಜನರು ಹೋಗಬೇಕಾದರೆ ಸೇತುವೆ ಕೊರತೆ ಇದೆ.ತೆಪ್ಪ,ದೋಣಿ,ತೆಪ್ಪಗಳ ಮುಖಾಂತರ ತಲುಪಬೇಕಾಗುತ್ತದೆ.ಮಳೆಗಾಲದಲ್ಲಿ ನದಿಗಳು ಉಕ್ಕಿ ಹರಿದು ಊರಿನ ಸಂಪರ್ಕವೇ ಕಡಿದು ಹೋಗುತ್ತಿತ್ತು.ಇದರಿಂದ ಬಹಳಷ್ಟು ಹಳ್ಳಿಗಳ ಜನರು ತುಂಬಾ ಸಮಸ್ಯೆ ಪಡುತ್ತಿದ್ದರು.ಶಾಲಾ ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತರಾಗುತ್ತಿದ್ದರು.ಆದರೆ ಕೆಲವೊಂದು ಪ್ರದೇಶಗಳಲ್ಲಿ ಒಂದೆರಡು ಹಳ್ಳಿಯವರಿಗಾಗಿ ಕಾಂಕ್ರೇಟ್ ಸೇತುವೆಯನ್ನು ನಿರ್ಮಿಸುವುದು ಕೂಡ ಅಸಾದ್ಯವಾಗಿತ್ತು.ಇಂತಹ ಹಳ್ಳಿ ಪ್ರದೇಶಗಳಿಗೆ ಸರ್ಕಾರ ಕೋಟ್ಯಾಂತರ ರೂ ವೆಚ್ಚ ಮಾಡಿ ಕಳಸ ಹೋಬಳಿಯ ಭದ್ರಾ ನದಿಯ ನೆಲ್ಲಿಬೀಡು,ಜಾಂಬ್ಲೆ,ಆನ್‍ಮಗೆ,ಅಂಬಾತೀರ್ಥ,ವಶಿಷ್ಟ ತೀರ್ಥ ಮುಂತಾದ ಕಡೆ ಪ್ರಸ್ತುತ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಎಂಟು ವರ್ಷಗಳ ಹಿಂದೆ ತೂಗು ಸೇತುವೆಗಳನ್ನು ನಿರ್ಮಿಸುವುದರ ಮುಖಾಂತರ ಆ ಬಾಗದ ಜನರ ಸಮಸ್ಯೆಯನ್ನು ನಿವಾರಿಸಿದ್ದಾರೆ.
ಈ ತೂಗು ಸೇತುವೆಯಿಂದ ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಮಸ್ಯೆಯನ್ನು ತಪ್ಪಿಸಿ ಸಂಪರ್ಕ ಕೊಂಡಿಯನ್ನು ಒಂದು ಮಾಡಿಸಿದಂತಾಗಿದೆ.ಅಲ್ಲದೆ ಈ ತೂಗು ಸೇತುವೆಗಳು ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ. ದೂರದೂರಿನಿಂದ ಬರುವ ಪ್ರವಾಸಿಗರಿಗೆ ಇಂತಹ ತೂಗು ಸೇತುವೆಗಳು ಆಕರ್ಷಣೆಗೆ ಒಳಗಾಗಿದೆ.ಪ್ರತೀ ದಿನ ನೂರಾರೂ ಪ್ರವಾಸಿಗರು ಬಂದು ಈ ತೂಗು ಸೇತುವೆಯಲ್ಲಿ ಖುಷಿಯಿಂದ ತೂಗಾಡುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.
ಆದರೆ ಅಂತಹ ತೂಗು ಸೇತುವೆಗಳು ಇಂದು ನಿರ್ವಹಣೆ ಇಲ್ಲದೆ ಅವಸಾನದ ಅಂಚಿಗೆ ತಲುಪುತ್ತಿದೆ.ಈ ತೂಗು ಸೇತುವೆಯನ್ನು ನಿರ್ಮಾಣ ಮಾಡಿದ ನಂತರ ಪ್ರತೀ ವರ್ಷ ಅದರ ನಿರ್ವಹಣೆ ಮಾಡಬೇಕಾಗುತ್ತದೆ.ತುಕ್ಕು ಹಿಡಿಯದಂತೆ ಅದಕ್ಕೆ ಬಣ್ಣ ಹೊಡೆಯಬೇಕಾಗುತ್ತದೆ.ಅಲ್ಲದೆ ಅದರ ರೋಪುಗಳಿಗೆ ಗ್ರೀಸ್ ಹೊಡೆದು ಅದನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವ ಹೊಣೆಗಾರಿಗೆ ಆಯಾ ಗ್ರಾಮದ ಪಂಚಾಯಿತಿಗೆ ಒಳಪಡುತ್ತದೆ.ಗ್ರಾಮ ಪಂಚಾಯಿತಿಯ ಸುಪರ್ಧಿಗೆ ಇದ್ದರೂ ಕೂಡ ಅದರ ನಿರ್ವಹಣೆಗೆ ಅಷ್ಟೋಂದು ದೊಡ್ಡದ ಮೊತ್ತ ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲ ಅಲ್ಲದೆ ಅದರ ನಿರ್ವಹಣೆಯು ಕಷ್ಟಕರ ಅನ್ನುವ ಮಾತು ಪಂಚಾಯಿತಿ ವಲಯಗಳಿಂದ ಕೇಳಿ ಬರುತ್ತಿದೆ.ಆದರೆ ಈ ತೂಗು ಸೇತುವೆಗಳು ನಿರ್ಮಾಣವಾಗಿ ಏಳೆಂಟು ವರ್ಷಗಳು ಸಂದರೂ ಕೂಡ ಅದರ ನಿರ್ವಹಣೆಯ ಜವಬ್ದಾರಿಯನ್ನು ಯಾರೂ ಕೂಡ ಮಾಡದೆ ಇರುವ ಪರಿಣಾಮ ತೂಗು ಸೇತುವೆಗಳು ತುಕ್ಕು ಹಿಡಿದಿವೆ.ಸೇತುವೆಯ ಅಡಿ ಬಾಗ ಸಂಪೂರ್ಣವಾಗಿ ತುಕ್ಕು ಹಿಡಿದು ಬೀಳೋ ಸ್ಥಿತಿಯಲ್ಲಿವೆ.ಸೇತುವೆಯ ಮೇಲ್ಬಾಗ ಪಾಚಿ ಕಟ್ಟಿಹೋಗಿವೆ.ಇದರಿಂದ ಮಳೆಗಾಲದಲ್ಲಿ ಅದೇಷ್ಟೋ ಜನರು ಜಾರಿ ಬಿದ್ದಿರುವ ಘಟನೆಗಳು ಇವೆ.ಕೆಲವೊಂದು ಸೇತುವೆಗೆ ಅಳವಡಿಸಿದ ತಡೆಬೇಲಿ ಕಳ ್ಳಕಾಕರ ಪಾಲಾಗಿವೆ.ಇಷ್ಟಾದರೂ ಸಂಬಂದಿಸಿದವರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ.
ಎಂಟು ವರ್ಷಗಳ ಹಿಂದೆ ಅನುದಾನ ನೀಡಿ ನಿರ್ಮಿಸಿದ ಶಾಸಕರು ಮತ್ತೆ ಈ ಬಾರಿ ಚುನಾಯಿತರಾಗಿದ್ದಾರೆ.ಅಂದು ನಿಮಾರ್ಣ ಮಾಡಿದ ತೂಗು ಸೇತುವೆಗಳಿಗೆ ಇಂದು ನಿರ್ವಹಣೆಗೆ ಬೇಕಾದ ಅನುದಾನ ಕೂಡ ನೀಡಬೇಕಾದ ಅನಿರ್ವಾಯ ಇದೆ.ಇಲ್ಲವಾದಲ್ಲಿ ತೂಗು ಸೇತುವೆಗಳು ಸಂಪೂರ್ಣ ಶಿಥಿಲಗೊಂಡು ಗ್ರಾಮಸ್ಥರ ಅನುಕೂಲಕ್ಕೆ ಬರದೆ ಮತ್ತೆ ಸಂಪರ್ಕ ತಪ್ಪುವ ಸಾದ್ಯತೆಗಳು ಹೆಚ್ಚಿದೆ.