ಹಾಸನ : ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಪ್ರಧಾನಿ ರಾಜ್ಯಕ್ಕೆ ಏನು ಕೊಡುಗೆ ಅಂತಾ ಹೇಳ್ತಾ ಇಲ್ಲ. ಆದ್ರೆ ಕೇವಲ ವೈಯಕ್ತಿಕ ವಿಚಾರಗಳನ್ನು ಹೇಳುತ್ತಿದ್ದಾರೆ. ಹೀಗೆ ಪ್ರಧಾನಿಯಾಗಿ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಮತ ಕೇಳೋದಕ್ಕೆ ಏನು ನೈತಿಕತೆ ಇದೆ. ಮಹಾರಾಷ್ಟ್ರಕ್ಕೆ ಏನು ಅನುದಾನ ಕೊಟ್ಟಿದ್ದಾರೆ, ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ. ಕರ್ನಾಟಕ ಏನು ಪಾಕಿಸ್ತಾನವಾ..?? ನಾಚಿಕೆ ಆಗಬೇಕು ಇವರಿಗೆ. ತುಮಕೂರಿಗೆ ನೀರು ಹರಿಸೋದಕ್ಕೆ ಬಿಜೆಪಿ ಐದು ವರ್ಷ ಇತ್ತಲ್ಲಾ ಯಾಕೆ ಆಗಲಿಲ್ಲ ಎಂದಿದ್ದಾರೆ.
ಈಶ್ವರಪ್ಪ ನೀರಾವರಿ ಸಚಿವರಾಗಿದ್ರಲ್ಲಾ, ಯಾಕೆ ನೀರು ಹರಿಸಲಿಲ್ಲ ತುಮಕೂರಿಗೆ? ಇದೀಗ ನೀರಿನ ರಾಜಕೀಯ ಮಾಡೋದಕ್ಕೆ ಹೊರಟಿದ್ದಾರೆ.ಇವರ ದೃಷ್ಟಿ ಇರೋದು ಕೇವಲ ಶಿವಮೊಗ್ಗಕ್ಕೆ ಮಾತ್ರ. ಮೂರು ವರ್ಷ ಮಂತ್ರಿಯಾಗಿದ್ದು, ಮಜಾ ಮಾಡಿ ಹೋಗಿದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ .ಬೆಳಗ್ಗೆ ಎದ್ದು ತುತ್ತೂರಿ ಊದುತ್ತಾ ಇದ್ದಾರೆ ಎಂದರು.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ ಮಂಜು ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ ಅವರು
ಬಿಜೆಪಿಯಲ್ಲಿ ಯಾರೂ ಕ್ಯಾಂಡಿಯೇಟ್ ಇರಲಿಲ್ವಾ.ಐದು ವರ್ಷ ಪಕ್ಷದಲ್ಲಿ ಕೆಲಸ ಮಾಡು ಅಂತಾ ಹೇಳಬಹುದಿತ್ತಲ್ವಾ. ಒಬ್ಬ ಬಿಜೆಪಿಯ ಪ್ರಾಮಾಣಿಕರಿಗೆ ಟಿಕೆಟ್ ಕೊಟ್ಟಿದ್ರೆ ಒಪ್ತಾ ಇದ್ದೆ ಎಂದರು.
ಮಂಡ್ಯ ನಿಖಿಲ್ ಸ್ಪರ್ಧೆ ವಿಚಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇವಣ್ಣ ಅವರು ನಾನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡುತ್ತೇನೆ.ಕೆಲವು ವ್ಯಕ್ತಿಗಳಿಂದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ನಡೆಯುತ್ತಿದೆ.ಕೆಲವರು ಫೋನ್ ರೆಕಾರ್ಡ್ ಮಾಡುವುದು, ಕದ್ದಾಲಿಕೆ ಮಾಡೋ ವ್ಯವಸ್ಥೆ ಆಗಬೇಕು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಚುನಾವಣಾಧಿಕಾರಿಗಳಿಂದ ನೊಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ಒಮ್ಮೆ ನಾಮಪತ್ರ ಅಂಗೀಕಾರ ಅದ್ಮೇಲೆ ನಂತರ ಕ್ರಮ ಕೈಗೊಳ್ಳಲು ಬರುವುದಿಲ್ಲ. ಜಿಲ್ಲಾಧಿಕಾರಿಗಳು ಬಿಜೆಪಿ ಪರ ಮಾಡುವುದನ್ನು ನಿಲ್ಲಿಸಬೇಕು. ಏನಾದ್ರು ಕೇಳಿದ್ರೆ ನಾನು ಚುನಾವಣಾ ಆಯೋಗದಿಂದ ಬಂದಿದ್ದೇನೆ ಎನ್ನುತ್ತಿದ್ದಾರೆ.
ನಮ್ಮ ಅಭ್ಯರ್ಥಿಗೆ ದಿನಾ ನೊಟೀಸ್ ಕೊಟ್ಟು ತೊಂದರೆ ಕೊಡುತ್ತಿದ್ದಾರೆ .ನಮಗೆ ಇತರೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದರು.
ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಪರ್ಸಂಟೇಜ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇವಣ್ಣ ಅವರು ರಾಜ್ಯದ ಹಣ ಲೂಟಿ ಹೊಡೆದು ಜೈಲಿನಲ್ಲಿದ್ದು ಬಂದವರು ಪ್ರಧಾನಿ ಅವರ ಪರ ಪ್ರಚಾರ ಮಾಡೋದಕ್ಕೆ ಬರುತ್ತಾರೆ.
ಇದನ್ನು ಪ್ರಧಾನಿಯವರು ಅರ್ಥ ಮಾಡಿಕೊಳ್ಳಬೇಕು. ಪರ್ಸೆಂಟೆಜ್ ಅಂತಾ ಏನಾದ್ರೂ ಇದ್ರೆ ಅದು ಬಿಜೆಪಿಯಲ್ಲಿ.
ರಾಷ್ಟ್ರ ಉಳಿತಾಯಬೇಕಾದ್ರೆ ಬಿಜೆಪಿ ತೊಲಗಬೇಕು.ಬಿಜೆಪಿ ತೊಲಗದಿದ್ದರೆ ದೇಶಕ್ಕೆ ಆಪತ್ತು.
೨೦೧೮ ರಲ್ಲಿ ಸಂಗೋಳ್ಳಿ ರಾಯಣ್ಣ ಬ್ರಿಗೆಡ್ ಕಟ್ಟಿದ್ರು. ಸಂಗೋಳ್ಳಿ ರಾಯಣ್ಣನನ್ನು ಬಿಟ್ಟು ಯಡಿಯೂರಪ್ಪನ ಪಾದಕ್ಕೆ ಬಿದ್ರು. ನಾವು ಜನ ಅಧಿಕಾರ ಕೊಟ್ರೆ ಇರ್ತೇವೆ, ಇಲ್ಲಾ ಅಂದ್ರೆ ಪಡುವಲಹಿಪ್ಪೆ ಮನೆಯಲ್ಲಿ ಎರಡು ರಾಗಿ ಗುಂಡು ಹೊಡೆದು ಮಲ್ಕೋತೀವಿ ಎಂದಿದ್ದಾರೆ.










