ಹಾರ್ದಿಕ್ ಪಟೇಲ್ ಗೆ ಎರಡು ವರ್ಷ ಜೈಲು…

264
firstsuddi

ಅಹಮದಬಾದ್ – 2015ರಲ್ಲಿ ಪಾಟೀದಾರ್ ಆಂದೋಲನದ ವೇಳೆ ಬಿಜೆಪಿ ಶಾಸಕ ರಿಶಿಕೇಶ್ ಪಟೇಲರ ವಿಸಾನಗರ ಕಚೇರಿ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗಿತ್ತು.ಗುಜರಾತ್ ನ ವಿಸಾನಗರ ಕೋರ್ಟ್ ನಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿತ್ತು. ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ತಪ್ಪಿತಸ್ಥ ಎಂದು ಕಂಡುಬಂದಿದ್ದು, ಹಾರ್ದಿಕ್ ಹಾಗೂ ಆತನ ಸಹಚರರಾದ ಲಾಲ್ಜೀ ಪಟೇಲ್ ಹಾಗು ಅಂಬಾಲಾಲ್ ಪಟೇಲ್ ರನ್ನು ಕೋರ್ಟ್ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದು, ಎಲ್ಲ ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 50,000 ರೂ ಗಳ ದಂಡವನ್ನೂ ವಿಧಿಸಲಾಗಿದೆ.