ಮೋದಿ ಅವರೆ ಕನ್ನಡಕ ಹಾಕಿಕೊಂಡು ಆಕಾಶ ನೋಡಿ ಮಾತನಾಡಬೇಡಿ.-ವಿಶ್ವನಾಥ್ …

484
firstsuddi

ಹಾಸನ: ದಕ್ಷಿಣ ಭಾರತದಲ್ಲಿ ಪ್ರಧಾನಿಯಾಗಲು ಯಾರೂ ಇಲ್ಲ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಹೊಳೆನರಸೀಪುರದಲ್ಲಿ ಗೌಡರ ಜೀವನ ಸಾಧನೆ ಕುರಿತ ‘ನಮ್ಮೂರ ದ್ಯಾವಪ್ಪ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೋದಿ ಅವರೆ ಕನ್ನಡಕ ಹಾಕಿಕೊಂಡು ಆಕಾಶ ನೋಡಿ ಮಾತನಾಡಬೇಡಿ. ಕೆಳಗೆ ನೋಡಿ ಮಾತನಾಡಿ ಎಂದು ಟೀಕೆ ಮಾಡಿದ್ದು, ಹಿಂದೆ ಕರುಣಾನಿಧಿ, ಕಾಮ್ರರಾಜ್ ನಾಯ್ಡು ,ನಿಜಲಿಂಗಪ್ಪ, ದೇವರಾಜ್ ಅರಸ್, ಇದ್ದರು ಈಗಾಗಲೇ ಎಚ್.ಡಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾರೆ. ಮತ್ತೆ ಆಗುವ ಅರ್ಹತೆ ಹೊಂದಿದ್ದಾರೆ ಯಾರು ಇಲ್ಲ ಎನ್ನಬೇಡಿ ಈಗಿನ ರಂಗಿನ ರಾಜಕೀಯದಲ್ಲಿ ಜನರ ದುಗುಡ, ದುಮ್ಮಾನಕ್ಕೆ, ಸ್ಪಂದಿಸುವ ವ್ಯವಧನ ಇರುವುದು ದೇವೇಗೌಡರಿಗೆ ಮಾತ್ರ. ದೇಶದಲ್ಲಿರುವ ಜಾತ್ಯತೀತ ಶಕ್ತಿ ಮತ್ತೆ ಒಂದಾಗ ಬೇಕಾಗಿದೆ ಎಂದು ತಿಳಿಸಿದರು.