ಮಂಡ್ಯ: ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ ಎಫೆಕ್ಟ್ ಇದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಹೊಸ ಬಾಂಬ್ ಸಿಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯಿಂದಲೇ ಐದು ಜನ ಶಾಸಕರು ಯೂಟರ್ನ್ ತೆಗೆದುಕೊಳ್ಳುತ್ತಾರೆ. ಅವರ ಕೈಯಲ್ಲೇ ರಾಜೀನಾಮೆ ಕೊಡಿಸೋಣ. ಸರ್ಕಾರಕ್ಕೆ ಜಾರಕಿಹೋಳಿ ಸಹೋದರರಿಂದ ಯಾವ ರೀತಿ ಎಫೆಕ್ಟ್ ಇದೆ. ಅವರೇನು ಹೇಳಿಕೆ ನೀಡಿದ್ದಾರೆ. ಅವರಿಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡುತ್ತಿದ್ದೇನೆ ಅಷ್ಟೇ ಎಂದಿದ್ದಾರೆ.









