ಚಿಕ್ಕಮಗಳೂರು:ಹೆಂಡತಿ ಪರಪುರುಷನ ತೆಕ್ಕೆಯಲ್ಲಿ ಇದ್ದದ್ದನ್ನ ಕಂಡ ವ್ಯಕ್ತಿಯೋರ್ವ ಆಕ್ರೋಶಗೊಂಡು ತನ್ನ ಹೆಂಡತಿಯ ತಲೆಯನ್ನ ಕಡಿದು, ರುಂಡದೊಂದಿಗೆ 20 ಕಿ.ಮೀ, ಬೈಕ್‍ನಲ್ಲಿ ಸಂಚಾರ ಮಾಡಿ ತಲೆ ಸಮೇತ ಸ್ಟೇಷನ್‍ಗೆ ಬಂದು ಸರಂಡರ್ ಆಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಸತೀಶ್ ತನ್ನ ಹೆಂಡತಿಯ ತಲೆಯನ್ನ ಕಡಿದ ವ್ಯಕ್ತಿ. 9 ವರ್ಷಗಳ ಹಿಂದೆ ರೂಪ ಎಂಬುವಳನ್ನ ಪ್ರೀತಿಸಿ ಮದುವೆಯಾಗಿದ್ದ ಸತೀಶ್‍ಗೆ ಇಬ್ಬರು ಮಕ್ಕಳು. ಬೆಂಗಳೂರಿನಲ್ಲಿ ಡ್ರೈವರ್ ವೃತ್ತಿ ಮಾಡ್ತಿದ್ದ ಸತೀಶ್ ಶಿವನಿಗೆ ಬಂದು ಮಾಂಸದ ಅಂಗಡಿ ಇಟ್ಟುಕೊಂಡು ಹೆಂಡತಿ ಜೊತೆಗಿದ್ದ. ಮೃತ ರೂಪಾಗೆ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದಿದ್ರಿಂದ ಇಬ್ಬರ ನಡುವೆ ಸಾಕಷ್ಟು ಗಲಾಟೆ ಕೂಡ ನಡೆದು, ಸ್ಟೇಷನ್ ಮೆಟ್ಟಿಲು ಕೂಡ ಹತ್ತಿದ್ರು. ಪೊಲೀಸರು ಹಾಗೂ ಊರಿನ ಹಿರಿಯರು ರಾಜಿ ಕೂಡ ಮಾಡಿದ್ರು. ನಿನ್ನೆ ಸಂಜೆ ಮತ್ತೆ ಇಬ್ಬರು ಒಟ್ಟಿಗೆ ಇದ್ದದ್ದನ್ನ ಕಂಡ ಸತೀಶ್, ರೂಪಾ ಜೊತೆಗಿದ್ದ ವ್ಯಕ್ತಿಯ ಮೇಲೆ ಮಚ್ಚು ಬೀಸಿದ್ದಾನೆ. ಆತ ತಪ್ಪಿಸಿಕೊಂಡಿದ್ರಿಂದ ಹೆಂಡತಿಯ ತಲೆ ಕಡಿದು ಬೈಕ್‍ನಲ್ಲಿ 20 ಕಿ.ಮೀ. ದೂರದ ಅಜ್ಜಂಪುರ ಠಾಣೆಗೆ ಬಂದು ಸರಂಡರ್ ಆಗಿದ್ದಾನೆ. ಮಕ್ಕಳನ್ನ ಮದುವೆ ಮಾಡಿಲ್ಲ, ಮೂರು ಲಕ್ಷ ಸಾಲ ಮಾಡಿ ಅವನಿಗೆ ನೀಡಿದ್ದಾಳೆ, ಪ್ರೀತಿಸಿ ಮದುವೆಯಾಗಿ ಚಿನ್ನದಂತೆ ನೋಡ್ಕೊಂಡಿದ್ರು ಹೀಗೆ ಮಾಡಿದ್ದಾಳೆಂದು ಪೊಲೀಸರ ಮುಂದೆ ಅವಲತ್ತು ತೋಡಿಕೊಂಡಿದ್ದಾನೆ. ನನಗೆ ಯಾವ ಶಿಕ್ಷೆ ಕೊಡ್ತಿರೋ ಕೊಡಿ, ನಾನು ರಿಲೀಸ್ ಆದ ಮೇಲೆ ಅವನನ್ನ ಹುಡುಕಿ ಅವನನ್ನೂ ತೆಗೆದು ಮತ್ತೆ ಬರ್ತೀನಿ ಎಂದು ಹೇಳಿದ್ದಾನಂತೆ.









