ಬಿಜೆಪಿ ಪರಿವರ್ತನಾ ಯಾತ್ರೆಯ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಫುಲ್ ಮಾಹಿತಿ ಇಲ್ಲಿದೆ..

410

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಿ, ತಮ್ಮ ಭಾಷಣದ ಕೊನೆಯವರೆಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಆರಂಭದಲ್ಲಿ ನಾಡಪ್ರಭು ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಸರ್.ಎಂ.ವಿಶ್ವೇಶರಯ್ಯ, ಬಸವಣ್ಣ, ಮಾದರ ಚೆನ್ನಯ್ಯ, ಸಂಗೊಳ್ಳಿ ರಾಯಣ್ಣರಂತಹ ಪುಣ್ಯ ಪುರುಷರು ಹುಟ್ಟಿದ ನಾಡು ಕರ್ನಾಟಕ. ರಾಜ್ಯದಲ್ಲಿ ಪರಿವರ್ತನೆ ಆಗಬೇಕಿದ್ದರಿಂದ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಗೆಲ್ಲಿಸಬೇಕಿದೆ.

ಈ ಬಾರಿಯ ಚುನಾವಣೆಯಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ನಿಮ್ಮ ಅಮೂಲ್ಯ ಮತವನ್ನು ನೀಡಬೇಕಾಗಿದೆ. ಇಡೀ ದೇಶವೇ ಇಂದು ಎಲ್ಲವನ್ನು ನೋಡುತ್ತಿದ್ದು, ಎಲ್ಲರೂ ಬದಲಾವಣೆಯನ್ನು ಬಯಸುತ್ತಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಆದ್ರೆ ಇಂದು ಸೇರಿದ ಜನ ಸಮೂಹವನ್ನು ನಾನೆಂದಿಗೂ ನೋಡಿಲ್ಲ. ನಿಮ್ಮೆಲ್ಲರನ್ನು ನೋಡಿದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಕೊನೆ ಗಳಿಗೆಯಲ್ಲಿ ನಿಂತಿದೆ. ಕರ್ನಾಟಕದ ಜನತೆಗೆ ಕಾಂಗ್ರೆಸ್ ಸರ್ಕಾರ ಬೇಕಾಗಿಲ್ಲ. ಸಿದ್ದರಾಮಯ್ಯ ಸರ್ಕಾರದ ಕೌಂಟ್ ಡೌನ್ ಆರಂಭವಾಗಿದೆ ಎಂದು ಭವಿಷ್ಯ ನುಡಿದ್ರು.ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಬಿಜೆಪಿ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತತ್ವದಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ್ರೆ ಮಾತ್ರ ಸರ್ವರ ಪ್ರಗತಿ ಆಗಲಿದೆ. 21ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬದಲಾವಣೆ ತರಲಿದೆ. ಶ್ರೀಮಂತರಿಗೆ ಸೌಲಭ್ಯಗಳು ಸಿಗುವುದ ಸರಳವಾಗಿದೆ. ಆದ್ರೆ ನಾವು ಬಡವರಿಗೆ ಸೌಲಭ್ಯ ನೀಡುವಲ್ಲಿ ನಿರತವಾಗಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. 1 ಕೋಟಿ ಕರ್ನಾಟಕ ಜನರಿಗೆ ಭೀಮಾ ಯೋಜನೆ ಲಾಭ ಲಭಿಸಿದೆ. 8 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಸೌಲಭ್ಯ ದೊರೆತಿದೆ. ಕರ್ನಾಟಕದ 7 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಲಭಿಸಿದೆ. ಈ ತರಹದ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಪ್ರತಿಯೊಬ್ಬರಿಗೂ ಲಭಿಸುತ್ತಿವೆ. ಇದೇ ರೀತಿ ನಮ್ಮಲ್ಲಿ ಹಲವು ಯೋಜನೆಗಳಿದ್ದು, ಅವುಗಳನ್ನು ಜಾರಿಗೊಳಿಸಲು ರಾಜ್ಯದಲ್ಲಿ ಅವಕಾಶ ನೀಡಬೇಕೆಂದು ಜನತೆಯಲ್ಲಿ ಮನವಿ ಮಾಡಿಕೊಂಡರು.

ನಾಲ್ಕೂವರೆ ವರ್ಷಗಳಿಂದ ರಾಜ್ಯದ ನಾಯಕರು ತಮ್ಮ ಸ್ವಹಿತವನ್ನು ಹೊ0ದಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 73 ಕೋಟಿ ರೂ. ಅನುದಾನ ರಾಜ್ಯಕ್ಕೆ ಸಿಗುತ್ತಿತ್ತು, ಆದ್ರೆ ಇಂದು 2 ಲಕ್ಷಕ್ಕೂ ಕೋಟಿಗೂ ಅಧಿಕ ಹಣವನ್ನು ನೀಡಲಾಗುತ್ತಿದೆ. ಆದ್ರೆ ಕೇಂದ್ರದಿಂದ ಸಿಗುವ ಅನುದಾನವನ್ನು ಬಳಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರದಿಂದ ನೀಡಿದ ಅನುದಾನ ಸಮರ್ಪಕವಾಗಿ ಬಳಕೆ ಆಗಿಲ್ಲ ಅಂದ್ರು.ಕಾಂಗ್ರೆಸ್ ವರ್ಸಸ್ ಬಿಜೆಪಿ: 17 ಸಾವಿರ ಕೋಟಿ ರೂ. ಅನುದಾನದಲ್ಲಿ ಕರ್ನಾಟಕದಲ್ಲಿ 166 ಕಿಮೀ. ಸಬ್ ಅರ್ಬನ್ ರೈಲ್ವೆ ಕಾರ್ಯ ಆರಂಭವಾಗಿಲಿದೆ. ಸಬ್ ಅರ್ಬನ್ ಗೆ ಸಂಬಂಧಿಸಿದಂತೆ 28 ಹೊಸ ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಸಬ್ ಅರ್ಬನ್ ರೈಲ್ವೆ ಆರಂಭವಾಗುವದರಿಂದ ನಗರದಲ್ಲಿ ಟ್ರಾಫಿಕ್ ನಿರಾಳವಾಗಲಿದ್ದು, ಪರಿಸರ ಸಂರಕ್ಷಣೆ ಆಗಲಿದೆ.

ಯುಪಿಎ ನಾಲ್ಕು ವರ್ಷಗಳಲ್ಲಿ 950 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. ಬಿಜೆಪಿ ಕೇವಲ ಮೂರೂವರೆ ವರ್ಷಗಳಲ್ಲಿ 1,600 ಕಿಮೀ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಇದರಿಂದ ನಾವು ಎಷ್ಟು ವೇಗದಿಂದ ಕೆಲಸ ಮಾಡುತ್ತವೆ ಎಂಬುದು ತಿಳಿಯುತ್ತದೆ. ಯುಪಿಎ ಸರ್ಕಾರ ಕರ್ನಾಟಕದಲ್ಲಿ 38 ಕಿಮೀ ರೈಲ್ವೆ ಪಥ ನಿರ್ಮಾಣ ಮಾಡಿದೆ, ಆದ್ರೆ ಬಿಜೆಪಿ 200 ಕಿಮೀ ನಿರ್ಮಾಣ ಮಾಡಿದೆ. ಹವಾಯಿ ಚಪ್ಪಲ್ ಧರಿಸುವ ವ್ಯಕ್ತಿ ಹವಾಯಿ ಸಫರ್ (ವಿಮಾನಯಾಣ) ಮಾಡಬಹುದು. ದೆಹಲಿ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಒಂದಾದ್ರೆ ರೈತರ ಜಮೀನಿಗೆ ನೀರು ಸಿಗಲಿದೆ. ದೇಶದಲ್ಲಿ ತರಕಾರಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳ ಆಗಲಿದೆ. ರೈತನ ಮಗ ಯಡಿಯೂರಪ್ಪ ಸಿಎಂ ಆದ್ರೆ ರೈತಪರ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಲಿವೆ ಅಂತ ಹೇಳಿದ್ರು.

ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕ ಸರ್ಕಾರ `ಈಸ್ ಆಫ್ ಡೂಯಿಂಗ್ ಮರ್ಡರ್’ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆಯುತ್ತಿದ್ದು, ಇದರಿಂದ ಎಲ್ಲರ ಮನದಲ್ಲಿ ಗಾಯವಾಗಿದೆ. ಹಾಗಾಗಿ ನಿಮಗಾದ ಗಾಯಕ್ಕೆ ವೋಟಿನಿಂದಲೇ ಉತ್ತರ ನೀಡಬೇಕಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವ ದಿನ ಬಹಳ ದಿನ ಉಳಿದಿಲ್ಲ. ಕರ್ನಾಟಕ ಅಪರಾಧಿಗಳ ಸ್ವರ್ಗವಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತವಾಗಲಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯಿಂದ ಹಲವು ನಾಯಕರ ಜೇಬು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದ್ರೆ ಬೆಂಗಳೂರಿನ ಜನರು ಮತ್ತು ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾದ ಕೂಡಲೇ ಕೈ ಬಿಡಲಾಗಿದೆ. ಅಂಡರ್-19 ವಿಶ್ವಕಪ್ ಗೆಲುವಿನ ಹಿಂದೆ ರಾಹುಲ್ ದ್ರಾವಿಡ್ ಪರಿಶ್ರಮವಿದೆ.ಕರ್ನಾಟಕ ಜನರ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಕರ್ನಾಟಕ 10 ಪರ್ಸೆಂಟ್ ಕೆಲಸ ಮಾಡುತ್ತಿದೆ. ಇಲ್ಲಿ ಹಣ ನೀಡದೇ ಹೋದ್ರೆ ಯಾವುದೇ ಕೆಲಸಗಳು ನಡೆಯುವದಿಲ್ಲ.