ಕರ್ನಾಟಕ ಬಜೆಟ್ 2019, ಹೈಲೈಟ್ಸ್…

215
firstsuddi
ಬೆಂಗಳೂರು:ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ 2019-20ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿದರು.
2019-20 ನೇ ಸಾಲಿನ ಬಜೆಟ್  ಹೈಲೈಟ್ಸ್…
  • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನಮ್ಮ ಸರ್ಕಾರದ ಧ್ಯೇಯ. ಅದಕ್ಕೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿದ್ದೇವೆ.
  • ನೇಗಿಲ ಯೋಗಿಗೆ ಹೆಗಲು ಕೋಡುವುದು ನಮ್ಮ ಜವಾಬ್ದಾರಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ನಮ್ಮ ಆದ್ಯತೆ.
  •  ಕೊಡಗಿನಲ್ಲಿ ಮನೆ ಕಳೆದುಕೊಂಡು 840 ನಿರಾಶ್ರಿತರಗೆ ಮನೆ ಕಟ್ಟಿಸಿಕೊಟ್ಟಿದ್ದೇವೆ. 
  • ನೈಸರ್ಗಿಕ ವಿಕೋಪ ತಡೆಗೆ ಕ್ರಮ ಕೈಗೊಂಡಿದ್ದೇವೆ.
  • ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಕ್ರಮ.
  • ಬೀದಿಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂಪಾಯಿ ಸಾಲ ವಿತರಣೆ.
  •  ಕೊಡಗಿನಲ್ಲಿ 846 ನಿರಾಶ್ರಿತರಿಗೆ ಸರ್ಕಾರದಿಂದ ಮನೆ ನಿರ್ಮಾಣ.
  • ಸಂಧ್ಯಾ ಸುರಕ್ಷಾ ಮಾಸಾಶನ 1 ಸಾವಿರಕ್ಕೆ ಏರಿಕೆ
  •  ರಾಜ್ಯದ 156 ತಾಲೂಕುಗಳು ಬರಪೀಡಿಕವಾಗಿವೆ, ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಮರ್ಧವಾಗಿ ಸಜ್ಜಾಗಿದೆ.
  •  ಆರೋಗ್ಯ ಕರ್ನಾಟಕ ಯೋಜನೆಯನ್ನು ಆಯುಷ್ಮಾನ್​ ಭಾರತ ಯೋಜನೆ ಜೊತೆ ವಿಲೀನಗೊಳಿಸಲಾಗಿದೆ.
  • ಸಿರಿಧಾನ್ಯ ಬೆಳೆಯುವ ಕೃಷಿಕರಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ.
  • ಕರಾವಳಿ ಭಾಗದ ರೈತರಿಗೆ ಪ್ರೋತ್ಸಾಹ ಧನ.
  •  ಕೃಷಿ ತೋಟಗಾರಿಕೆ, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ರೂಪಾಯಿ.
  •  ಬರಪರಿಹಾರಕ್ಕಾಗಿ ಅಗತ್ಯ ಕ್ರಮ 300 ಕೋಟಿ ರೂ ಬಿಡುಗಡೆ.
  • ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದನಾ ಘಟಕ.
  • ತೋಟಗಾರಿಕೆಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್.
  • ರಾಜ್ಯದ ನೀರಾವರಿ ಯೋಜನೆಗೆ 1050 ಕೋಟಿ ರೂ. ಮೀಸಲು.
  • ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2500 ಕೋಟಿ.
  • ಧಾರವಾಡದಲ್ಲಿ ಮಾವು ಉತ್ಪಾದನಾ ಘಟಕ ಸ್ಥಾಪನೆ.
  •  ಹಾಲು ಉತ್ಪಾದನಾ ಪ್ರೋತ್ಸಾಹ ಧನ 6 ರೂಪಾಯಿ ಹೆಚ್ಚಳ.
  • ಮಂಗನ ಕಾಯಿಲೆ ನಿಯಂತ್ರಣಕ್ಕೆ 5 ಕೋಟಿ ರೂಪಾಯಿ ಅನುದಾನ.
  •  ಮೀನುಗಾರಿಗೆ, ದೋಣಿಗಳಿಗೆ ಶೇ  50ರಷ್ಟು  ಸಹಾಯಧನ
  • ಸಿಗಡಿ ಮೀನು ಕೃಷಿ ಪ್ರೋತ್ಸಾಹಕ್ಕೆ ಶೇ.50ರಷ್ಟು ಅನುದಾನ.
  • ಮಲ್ಪೆ ಕಡಲ ತೀರದಲ್ಲಿ ತ್ಯಾಜ್ಯ ಘಟಕ ನಿರ್ವಹಣೆಗೆ 15 ಕೋಟಿ.
  • ರೈತ ಕೃಷಿ ಕಣಜ ಯೋಜನೆಗೆ ೧೫ ಕೋಟಿ
  • ಈರುಳ್ಳಿ, ಆಲೂಗಡ್ಡೆ ಬೆಳೆಗಳಿಗೆ ಪ್ರೋತ್ಸಾಹ ಧನ.
  • ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ.
  • ಇಸ್ರೇಲ್ ಮಾದರಿ ಕೃಷಿ ತಂತ್ರಜ್ಞಾನ ಜಾರಿ
  • ಆಭರಣಗಳ ಮೇಲೆ ಬೆಳೆ ಸಾಲ. ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ.
  • ನಂದಿನ ಪಾರ್ಲರ್ ಗಳಲ್ಲಿ ಸಿರಿಧಾನ್ಯಗಳ ಮಾರಾಟಕ್ಕೆ ಅವಕಾಶ.
  • ಕೃಷಿ ಉತ್ತನ್ನ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಾಗ ಸಂಗಹಕ್ಕೆ ಉಗ್ರಾಣ ನಿಗಮದಲ್ಲಿ
  •  ಕೊಪ್ಪಳ ಏತ ನೀರಾವರಿಗೆ 200 ಕೋಟಿ ರೂ. ಮೀಸಲು.
  • ರೈತರ ಪಂಪ್​ಸೆಟ್​ಗೆ  ಅನುದಾನ
  •  100 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ಧಿ.
  • ನೀರಾವರಿ ಯೋಜನ್ತೆಗಳಿಗೆ ಒಟ್ಟು 1,563 ಕೋಟಿ ರೂ. ಮೀಸಲು.
  • 200 ಕೋಟಿ ರೂ. ವೆಚ್ಚದಲ್ಲಿ ಶಿಕಾರಿಪುರ ತಾಲೂಕಿನ ಕೆರೆಗಳ ತುಂಬಿಸಲು ಯೋಜನೆ.
  •  ಬಳ್ಳಾರಿ ಗ್ರಾಮಾಂತರಕ್ಕೆ 60 ಕೋಟಿ ರೂ.
  •  ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ.
  • ಚಿಕ್ಕಮಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 50 ಕೋಟಿ ರೂ.
  •  ವಿಜಯಪುರದಲ್ಲಿ ಆಸ್ಪತ್ರೆಗೆ 40 ಕೋಟಿ ರೂ.
  • ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು.
  •  ಬಸವನ ಬಾಗೇವಾಡಿ ಮೂಲ ಸೌಕರ್ಯ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ.
  •  ಹವಾಮಾನ ಬದಲಾವಣೆ ಅಧ್ಯಯನಕ್ಕೆ 2 ಕೋಟಿ ರೂ. ಅನುದಾನ.
  • ಚರಂಡಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ
  •  4 ಹೊಸ ತಾಲೂಕು ಘೋಷಣೆ : ಹಾರೋಹಳ್ಳಿ, ಕಳಸ, ಚೇಳೂರು ಮತ್ತು ತೇರದಾಳ.
  •  ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 500 ರೂಪಾಯಿ ಹೆಚ್ಚಳ.
  •  ಹಾಸನದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಘೋಷಣೆ.
  •  20 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ.
  • ಹೇಮಾವತಿ ಎಡದಂಡೆ ಕಾಲುವೆಗೆ 80 ಕೋಟಿ ರೂ.
  • 449 ಕೋಟಿ ರೂ. ಕೆರೆಗಳ ಅಭಿವೃದ್ಧಿಗೆ  ಮೀಸಲು.
  • ಬೀದರ್‌ ಜಿಲ್ಲೆಯ ಎಲ್ಲ ಕೆರೆಗಳ ಅಭಿವೃದ್ಧಿಗೆ 300 ಕೋಟಿ ರೂ.
  • 12 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆ ಜಾರಿ.
  • ಕೆರೂರು, ಮಸ್ಕಿ ನೀರಾವರಿ ಯೋಜನೆ ಜಾರಿಗೆ.
  • ಚಾಮರಾಜನಗರದ ರೇಷ್ಮೆ ಕೈಗಾರಿಕಾ ಪುನಶ್ಚೇನಕ್ಕೆ 6 ಕೋಟಿ ರೂ.
  • ನಾಟಿಕೋಳಿ ಸಾಕಣೆಗೆ 5 ಕೋಟಿ ರೂ. ಉತ್ತೇಜನ ನೀಡಿಕೆ.
  • ಜೇನುಕೃಷಿ ಉತ್ತೇಜನಕ್ಕಾಗಿ 5 ಕೋಟಿ ರೂ. ಒದಗಿಸಲಾಗಿದೆ.
  • ತುಮಕೂರಿನಲ್ಲಿ  ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ.
  • ಅನ್ನ ಭಾಗ್ಯ ಯೋಜನೆಗೆ 3700 ಕೋಟಿ ರೂ. ಯೋಜನೆ ಸೋರಿಕೆ ಪತ್ತೆಗೆ ವಿಚಕ್ಷಣ ದಳ ಘೋಷಣೆ.
  • 3 ಮಹಾನಗರ ಪಾಲಿಕೆಗೆ ತಲಾ 150 ಕೋಟಿ ರೂಪಾಯಿಗಳು. ಬೆಳಗಾವಿ, ಬಳ್ಳಾರಿ ಮತ್ತು ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ವಿಜಯಪುರ ಪಾಲಿಕೆ ಅಭಿವೃದ್ಧಿಗೆ ತಲಾ 125 ಕೋಟಿ ರೂಪಾಯಿಗಳು.
  •  ಶಿಕ್ಷಕರ ಸಾಮರ್ಥ್ಯ ವರ್ಧನೆ, ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ.
  •  ಅಂಕಪಟ್ಟಿಗಳ ಡಿಜಿಟಲೀಕರಣಕ್ಕೆ 1 ಕೋಟಿ ರೂ. ಅನುದಾನ.
  •  ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಲಕಿಯರಿಗೆ ಬಾಲ ಮಂದಿರ ಸ್ಥಾಪನೆ.
  •  ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 1,325 ಕೋಟಿ ರೂ ಅನುದಾನ.
  •  ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1000 ಕೋಟಿ ರೂ
  •  ಬೆಂಗಳೂರು ಆಟೋ ಟ್ಯಾಕ್ಸಿ ಚಾಲಕರಿಗೆ ಸಾರಥಿ ಸೂರು ಯೋಜನೆ.
  •  ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ ಅನುದಾನ.
  • ಯಶವಂತ ಪುರ ರೈಲ್ವೆ-ಮೆಟ್ರೋ ನಿಲ್ದಾಣದ ನಡುವೆ ಪಾದಾಚಾರಿ ಮೇಲ್ಸೇತುವೆ.
  • BPLಕಾರ್ಡ್‌ ಹೊಂದಿರುವ ಗರ್ಭಿಣಿಯರಿಗೆ 6 ತಿಂಗಳ ಮಾಸಿಕ ಸಹಾಯ ಧನ 1000 ರೂ ಯಿಂದ ರೂ 2000ಕ್ಕೆ ಏರಿಕೆ.
  • ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂಪಾಯಿ
  • ಪ್ರಖ್ಯಾತ ಶಿಲ್ಪಕಲೆ ಪ್ರಚಾರಕ್ಕೆ ಕೋಲಾರ ಜಿಲ್ಲೆಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಕೇಂದ್ರ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ.
  •  ಎಸ್​​ಸಿ ಎಸ್​ಟಿ ಅಭಿವೃದ್ಧಿಗೆ 30,445 ಕೋಟಿ ಅನುದಾನ.
  • ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಕೋಟಿ ರೂ.
  • ವೆಚ್ಚದಲ್ಲಿ ಮಂಗನ ಕಾಯಿಲೆ ಸಂಶೋಧನೆ ಮತ್ತು ಚಿಕಿತ್ಸಾ ಘಟಕ ಸ್ಥಾಪನೆ.
  • ಬೆಂಗಳೂರು ಏರ್ ಪೋರ್ಟ್ ಗೆ ಹೊಸ ಟರ್ಮಿನಲ್ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ 32 ಕೋಟಿ ರೂಪಾಯಿ ಅನುದಾನ.
  • ವಿವಿಧ ಮಠ,ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ.
  • ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ. ಮೀಸಲು.
  • ವಿಜಯಪುರ 100 ಹಾಸಿಗೆಯ ಸಂಜಯ್ ಗಾಂಧಿ ಆಸ್ಪತ್ರೆಗೆ 40 ಕೋಟಿ ರೂ.
  • ಮೆಟ್ರೋ ಹಾಗೂ ಬಸ್‌ ಸಾರಿಗೆ ಸೇವೆಗೆ ಏಕ ರೂಪದ ಪಾಸ್‌.
  • ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ.
  • ಮುಸ್ಲಿಂ ಖಬ್ರಸ್ಥಾನಗಳ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ.
  • ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮೀಸಲು.
  •  ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ 30 ಸಾವಿರ ರೂಪಾಯಿಗಳಿಗೆ ಏರಿಕೆ.
  •  ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶ ಅಭಿವೃದ್ಧಿಗೆ 400 ಕೋಟಿ
  •  ಪೆಟ್ರೋಲ್ ಚಾಲಿತ ಆಟೋಗಳನ್ನು ವಿದ್ಯುತ್ ಚಾಲಿತ ಆಟೋಗಳಾಗಿ ಪರಿವರ್ತಿಸಲು ಸಹಾಯ ಧನ.
  •  4 ಸಾರಿಗೆ ಸಂಸ್ಥೆಗಳಿಗೆ 3544 ವಿವಿಧ ಮಾದರಿಯ ಹೊಸ ಬಸ್ ಗಳು.
  • ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ. ಅನುದಾನ
  •  ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ
  • ಮಂಡ್ಯ ಮೈಶುಗರ್‌ ಸಕ್ಕರ್ ಕಾರ್ಖಾನೆ ಮರು ನಿರ್ಮಾಣಕ್ಕೆ 100 ಕೋಟಿ ರೂ.
  • 90 ಕೋಟಿ ರೂ. ನರೇಗಾ ಯೋಜನೆಯಡಿ ಶಾಲಾ ಕಂಪೌಂಡ್ ನಿರ್ಮಾಣ.
  • 2000 ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ