ಬಿ.ಬಿ ನಿಂಗಯ್ಯ ಹಾಗೂ ಮೋಟಮ್ಮ ಅವರಿಗೆ ನಾನೇ ರಾಜಕೀಯ ಗುರು: ಡಿ.ಬಿ ಚಂದೇಗೌಡ…

238
firstsuddi

ಮೂಡಿಗೆರೆ: ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ 25 ವರ್ಷಗಳು ಪೂರೈಸಿದ್ದು, ಇಂದು ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕಾನೂನು ಸಚಿವ ಡಿ.ಬಿ ಚಂದೇಗೌಡ ಅವರು ಇಲ್ಲಿರುವ ರಾಜಕಾರಣಿಗಳಾದ ಬಿ.ಬಿ ನಿಂಗಯ್ಯ ಹಾಗೂ ಮೋಟಮ್ಮ ಸೇರಿದಂತೆ ಹಲವರಿಗೆ ನಾನೇ ರಾಜಕೀಯ ಗುರು. ನಾನು ಅಂದೇ ಮೋಟಮ್ಮ ಅವರ ಬಳಿ ಹೇಳಿದ್ದೆ ನೀವು ಹಳ್ಳಿಯಿಂದ ದಿಲ್ಲಿಯವರೆಗೆ ಹೋಗುತ್ತೀರಾ, ದೊಡ್ಡಮಟ್ಟಕ್ಕೆ ಬೆಳೆಯುತ್ತೀರಾ ಎಂದಿದ್ದೆ. ಅದರಂತೆ ಇಂದು ದೊಡ್ಡ ಮಟ್ಟಕ್ಕೆ ಮೋಟಮ್ಮ ಹಾಗೂ ನಿಂಗಯ್ಯ ಅವರು ಬೆಳೆದಿರುವುದು ನನಗೆ ಸಂತೋಷ ತಂದಿದೆ. ಇವರನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಕರೆದೊಯ್ಯಲು ನಾನು ಹಲವು ರೀತಿಯಲ್ಲಿ ಶ್ರಮಿಸಿದ್ದೇನೆ ಎಂದರು.