ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿಯವರು ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಗೋಕಾಕ್‍ನಲ್ಲೂ ಇಲ್ಲ, ನನ್ನ ಸಂಪರ್ಕಕ್ಕೂ ಸಿಕ್ಕಿಲ್ಲ. ರಮೇಶ್ ನನ್ನ ಸಹೋದರನೇ ಆದರೂ ಕೂಡ ನಮ್ಮಿಬ್ಬರ ವ್ಯವಹಾರ ಬೇರೆ ಬೇರೆ. ಅವರನ್ನು ಯಾರೂ ಬಲವಂತವಾಗಿ ಹಿಡಿದಿಟ್ಟಿಲ್ಲ. ಅವರು ಸ್ವಯಂಪ್ರೇರಿತವಾಗಿ ಹೋಗಿರಬಹುದು. ಪಕ್ಷದಿಂದ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಹಾಗಾಗಿ ಸಿಎಲ್‌ಪಿ ನಾಯಕರನ್ನು ಅವರನ್ನು ಭೇಟಿಯಾಗಬಹುದು ಎಂದು ತಿಳಿಸಿದರು.










