ಗೋಣೀಬೀಡು ಪೊಲೀಸ್ ಠಾಣೆ ಆವರಣದಲ್ಲಿ ಮಹಾಗಣಪತಿ ವಿಗ್ರಹ ಪ್ರತಿಷ್ಠಾಪನೆ…

813
firstsuddi

ಮೂಡಿಗೆರೆ:ತಾಲ್ಲೂಕಿನ ಗೋಣೀಬೀಡು ಪೋಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಶ್ರೀ ಸಿದ್ದಿ ವಿನಾಯಕ ಮಹಾಗಣಪತಿಯ ನೂತನ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಾಯಿತು. 
ನೂತನವಾಗಿ ಪ್ರತಿಷ್ಠಾಪಿಸಿದ ಮಹಾಗಣಪತಿ ದೇವಸ್ಥಾನವು ಇಲ್ಲಿನ ಗ್ರಾಮಸ್ಥರ ಹಲವು ದಿನಗಳ ನಿರೀಕ್ಷೆಯಂತೆ ಮತ್ತು ಇಲ್ಲಿನ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಈ ಹಿಂದೆಯೇ ಸಂಬಂದಿಸಿದ ಇಲಾಖೆಯ ಅನುಮತಿ ದೊರಕಿದ್ದು ಮತ್ತು ಇಲ್ಲಿನ ಸರ್ವಧರ್ಮಿಯರು ಇದರ ಬಗ್ಗೆ ಸಹಮತವ್ಯಕ್ತಪಡಿಸಿ ಸಹಕರಿಸಿದ್ದರಿಂದ ಠಾಣೆಯ ಆವರಣದಲ್ಲಿ ನೂತನವಾಗಿ ಗಣಪತಿ ದೇವಸ್ಥಾನವನ್ನು ಕಟ್ಟಲು ಸಹಕಾರಿಯಾಯಿತು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಕೆ.ಶಿವೇಗೌಡ ತಿಳಿಸಿದರು.
ಈ ಹಿಂದೆಯೇ ಗ್ರಾಮ ಪಂಚಾಯತಿಯ ಅನುಮತಿ ಪಡೆದು ಮತ್ತು ಹೊಸದಾಗಿ ನಿರ್ಮಾಣಗೊಂಡ ಪೊಲೀಸ್ ಠಾಣೆಯ ಜಾಗವು ಗ್ರಾಮ ಪಂಚಾಯತಿಯಿಂದ ನೀಡಿದ್ದಾದರೂ ಸುಮಾರು 1990 ರ ದಶಕದಲ್ಲಿ ಠಾಣೆಯ ಜಾಗವು ನಿಗದಿಯಾಗಿ ಕಟ್ಟಡ ಕಟ್ಟಲು ಕಾಮಾಗಾರಿಯನ್ನು ಪ್ರಾರಂಭಿಸುವ ಸಮಯದಲ್ಲಿ ಇಲ್ಲಿ ಒಂದು ಗಣೇಶನ ವಿಗ್ರಹದ ಕಲ್ಲು ದೊರೆತಿದ್ದು, ಅದನ್ನು ಆ ಸಮಯದಲ್ಲಿ ತೆರವುಗೊಳಿಸಿ ಹೊಸದಾಗಿ ಠಾಣೆಯ ಕಟ್ಟಡವನ್ನು ಕಟ್ಟಲಾಗಿತ್ತು. ಆದರೆ ಈ ಠಾಣೆಯು ಆದ ದಿನದಿಂದಲೂ ನಮಗೆ ಮತ್ತು ಗ್ರಾಮಸ್ಥರಿಗೆ ಯಾವುದಾದರೊಂದು ತೊಂದರೆಗೆ ಒಳಪಡುತ್ತಿದ್ದೆವು ಎಂದು ಇಲ್ಲಿನ ವಿಶ್ವ ಹಿಂದು ಪರಿಷತ್ ತಾಲ್ಲೂಕು ಉಪಾಧ್ಯಕ್ಷರಾದಂತಹ ಮಹೇಶ್ ಸಾಲ್ಮರ ಅವರು ತಿಳಿಸಿದರು.
ದೇವಸ್ಥಾನವು ಠಾಣೆ ಆವರಣದಲ್ಲಿರುವುದರಿಂದ ಇಲ್ಲಿನ ಜನತೆಗೆ ಸಿಕ್ಕ ಅತಿ ದೊಡ್ಡ ಕೊಡುಗೆ. ಪೋಲೀಸ್ ಠಾಣೆಗೆ ತನ್ನ ಕೆಲಸಕ್ಕಾಗಿ ಯಾರಾದರು ಈ ಹಿಂದೆ ಬರುವಾಗ ಏನೋ ಒಂದು ಇರಿಸು ಮುರಿಸು ಬರುವುದರು ಸಹಜವಾಗಿತ್ತು ಆದರೆ ಇಂತಹ ದೇವಸ್ಥಾನವು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಠಾಣೆ ಆವರಣದಲ್ಲಿರುವುದರಿಂದ ಜನರಿಗೆ ತನ್ನ ಕೆಲಸಕ್ಕಾಗಿ ಬರುವಾಗ ದೇವರ ಸನ್ನಿದಿಗೆ ಬಂದಿದ್ದೇನೆ ಎಂದು ಬಾಸವಾಗುತ್ತದೆ. ಈ ದೇವಸ್ಥಾನವನ್ನು ಇಲ್ಲಿಯ ಗ್ರಾಮಸ್ಥರೇ ನಿರ್ವಹಣೆ ಮಾಡುತ್ತಾರಲ್ಲದೇ ಮತ್ತು ಗ್ರಾಮ ಪಂಚಾಯಿತಿಯಿಂದ ಯಾವುದಾದರು ಮೂಲ ಸೌಕರ್ಯ ಬೇಕಾದಲ್ಲಿ ಪಂಚಾಯಿತಿಯಿಂದ ಒದಗಿಸಲು ನಮ್ಮ ಪಂಚಾಯಿತಿಯು ಬದ್ಧವೆಂದು ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರಾದಂತಹ ಸಂದೀಪ್ ಈ ಸಂದರ್ಭದಲ್ಲಿ ತಿಳಿಸಿದರು.
ವಿಶೇಷವಾಗಿ ಇಲ್ಲಿನ ಕಾರ್ಯಕ್ರಮದ ಉಸ್ತುವಾರಿಯನ್ನು ಇಲ್ಲಿನ ಪಿ.ಎಸ್.ಐ ರಾಕೇಶ್ ವಹಿಸಿದ್ದು, ಮತ್ತು ಇಲ್ಲಿನ ಎಲ್ಲಾ ಸಿಬ್ಬಂದಿಗಳು ಖಾದಿ ಬಟ್ಟೆ ಧರಿಸಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ.ರತನ್, ವೃತ್ತ ನಿರೀಕ್ಷಕರಾದ ಜಗದೀಶ್ , ಭಾರತಿ , ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮೀತಿ ಅಧ್ಯಕ್ಷರಾದ ಸುಂದರ್ ಕುಮಾರ್, ಸಂದೀಪ್.ಎಂ.ಸಿ, ಪಿಶ್ ಮೋಣು ಸೇರಿದಂತೆ ಇತರರು ಇದ್ದರು.