ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ ಕೆ ಶಿವಕುಮಾರ್ ಅವರು ಎಲ್ಲರಿಗೂ ಆಸೆ ಇರುತ್ತದೆ. ಅದೇನು ತಪ್ಪಲ್ಲ.ರಮೇಶ್ ಜಾರಕಿಹೊಳಿ ಅವರು ಆವೇಶದಲ್ಲಿ ಮಾತನಾಡಿದ್ದಾರೆ.ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರೇ, ಅವರ ಬಳಿ ಮಾತನಾಡುತ್ತೇನೆ. ನನಗೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ ಏಳೆಂಟು ತಿಂಗಳು ಖಾಲಿ ಇದ್ದೆ. ಧರ್ಮಸಿಂಗ್ ಅವಧಿಯಲ್ಲೂ ನನ್ನನ್ನು ಹೊರಗಿಟ್ಟಿದ್ದರು. ಯಾವ ನಾಯಕರೂ ನನ್ನ ಪರ ಮಾತನಾಡಲು ಬರಲಿಲ್ಲ. ನಂತರ ಹೈಕಮಾಂಡ್ ಕರೆದು ಸಚಿವ ಸ್ಥಾನ ಕೊಟ್ಟಿತು ಎಂದಿದ್ದಾರೆ.










