ಭಾರತೀಯ ನೌಕಾ ಸೇನೆಯ ಮಿಗ್-29k ತರಬೇತಿ ಯುದ್ಧ ವಿಮಾನ ಪತನ-ಪೈಲಟ್ ನಾಪತ್ತೆ…

156
firstsuddi

ನವದೆಹಲಿ : ಭಾರತೀಯ ನೌಕಾ ಸೇನೆಯ ಮಿಗ್-29 ತರಬೇತಿ ಯುದ್ಧ ವಿಮಾನ ಪತನಗೊಂಡ ಓರ್ವ ಪೈಲಟ್ ನಾಪತ್ತೆಯಾಗಿರುವ ಘಟನೆ ಅರೇಬಿಯನ್ ಸಮುದ್ರದ ಬಳಿ ನಡೆದಿದೆ. ಗೋವಾ ಬಂದರಿನ ಐಎನ್‍ಎಲ್ ವಿಕ್ರಮಾದಿತ್ಯ ನೌಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ತರಬೇತಿ ಹಂತದಲ್ಲಿರುವಾಗ ನಿನ್ನೆ ಸಂಜೆ ಅರೇಬಿಯನ್ ಸಮುದ್ರದಲ್ಲಿ ಪತನಗೊಂಡಿದ್ದು, ಕೂಡಲೇ ರಕ್ಷಣಾ ಸಿಬ್ಬಂದಿಗಳು ಓರ್ವ ಪೈಲಟ್ ನನ್ನು ಏರ್ ಲಿಫ್ಟ್ ಬಳಸಿಕೊಂಡು ರಕ್ಷಣೆ ಮಾಡಿದ್ದು, ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಪೈಲಟ್ ಗಾಗಿ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.