#IndiaSupportsCAA : ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಂದೋಲನ…

211
firstsuddi

ನವದೆಹಲಿ : ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು #IndiaSupportsCAA ಎಂಬ ಹ್ಯಾಶ್‍ಟ್ಯಾಗ್ ಅಡಿಯಲ್ಲಿ ತಮ್ಮ ಟ್ವಿಟರ್ ಮೂಲಕ ಆಂದೋಲನವನ್ನು ಆರಂಭಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು, ಸಿಎಎ ಎಂಬುವುದು ಕಿರುಕುಳಕ್ಕೆ ಒಳಗಾಗಿ ಬಂದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವುದೇ ಹೊರತು, ಯಾರ ಪೌರತ್ವವನ್ನು ಕಿತ್ತುಕೊಂಡು ಹೋಗುವುದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕೆಂದರೆ ನಮೋ ಆ್ಯಪ್ನಲ್ಲಿ ಇದರ ಬಗ್ಗೆ ವಿಷಯ, ಗ್ರಾಫಿಕ್ಸ್, ವೀಡಿಯೋಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಈ ಹ್ಯಾಶ್‍ಟ್ಯಾಗ್‍ನ್ನು ಪರಿಶೀಲಿಸಿ ಪೌರತ್ವ ಕಾಯ್ದೆಗೆ ನಿಮ್ಮ ಬೆಂಬಲವನ್ನು ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.