ಉಪಾನ್ಯಸಕರು ಅವಮಾನಿಸಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ…

199
firstsuddi

ಉಡುಪಿ : ಉಪನ್ಯಾಸಕರಿಂದ ಅವಮಾನಕ್ಕೊಳಗಾದ ಕಾರಣ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬ್ರಹ್ಮವಾರ್ ಬಳಿಯ ಮಂದಾರ್ತಿಯ ಮೈರ್ಕೋಮ್ ನಿವಾಸಿ ಚರಣ್ ಶೆಟ್ಟಿ(19) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಮೃತ ವಿದ್ಯಾರ್ಥಿ ಹೆಬ್ರಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದ್ದು, ಚರಣ್ ಅವರು ತಮ್ಮ ಕಾಲೇಜಿನ ಸಮಾರಂಭವೊಂದರಲ್ಲಿ ಉಪನ್ಯಾಸಕರಿಂದ ಅವಮಾನಕ್ಕೊಳಗಾಗಿದ್ದು, ಇದರಿಂದ ಮನನೊಂದ ಯುವಕ ತನ್ನ ಮನೆಯ ಸಮೀಪವಿದ್ದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚರಣ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸ್ನೇಹಿತನಿಗೆ ವೀಡಿಯೋ ಕರೆ ಮಾಡಿ ಉಪನ್ಯಾಸಕರಿಂದ ಅವಮಾನಕ್ಕೊಳಗಾದ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಕುರಿತು ಬ್ರಹ್ಮಾವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.