ಬೆಂಗಳೂರು:ಐಟಿ ದಾಳಿಗೆ ಸಂಬಂದಿಸಿದಂತೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಟ್ವೀಟ್ ಮಾಡಿದ್ದಾರೆ. ಐಟಿ ದಾಳಿ ಎಂದರೆ ಎಲ್ಲ ಪಕ್ಷದವರ ಮೇಲೂ ಸಮಾನವಾಗಿ ಆಗಬೇಕು. ಆದರೆ, ಇದುವರೆಗು ಬಿಜೆಪಿಯ ಯಾವ ನಾಯಕರ ಮೇಲೂ ಐಟಿ ದಾಳಿಯಾಗಿಲ್ಲ. ಕೇವಲ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳ ನಾಯಕರ ಮೇಲೆ ದಾಳಿ ಆಗುತ್ತಿದೆ. ಇದಕ್ಕೆ ಕಾರಣವೇನು? ಈ ಧೋರಣೆಯನ್ನು ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.










