ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟ ಹಿಡಿದ ಹಿನ್ನೆಲೆ, ಬಾವುಟ ಹಿಡಿಯಬೇಡಿ ಎಂದು ಯಾರಿಗೂ ಹೇಳಲು ಆಗುವುದಿಲ್ಲ. ಬಾವುಟ ಹಿಡಿದ ತಕ್ಷಣ ಮತ ಬರುತ್ತದೆ ಎಂದು ಹೇಳುವುದು ಸುಳ್ಳು. ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಲ್ಲ ಬಿಜೆಪಿ ಅಭ್ಯರ್ಥಿ. ಅವರು ನಮ್ಮ ಹೆಣ್ಣುಮಗಳು, ಮಂಡ್ಯದ ಸೊಸೆ. ಸುಮಲತಾ ಅವರಿಗೆ ಅವಮಾನ ಮಾಡುವುದು ಸರಿಯಲ್ಲ. ನಾನು ಕಾಂಗ್ರೆಸ್ ಬಿಟ್ಟು ಬರುವಾಗ ಹೈಕಮಾಂಡ್ ವೀಕ್ ಆಗಿತ್ತು ಎಂದು ಹೇಳಿದರು.










