ಕಳಸ: ಪ್ರಾರಂಭ ಮಾಡಿದ ಕೆಲಸವನ್ನು ಗುರಿ ಮುಟ್ಟುವ ತನಕ ಮಾಡಿ ಮುಗಿಸುವುದು ರೋಟರಿಯ ಉದ್ದೇಶವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದರು.
ಕಳಸ ರೋಟರಿ ಕ್ಲಬ್‍ಗೆ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಕೆಲ ವರ್ಷಗಳ ಹಿಂದೆ ರೋಟರಿ ಕ್ಲಬ್ ಪೊಲೀಯೋ ನಿರ್ಮೂಲನ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿತ್ತು.ಆದರೆ ಇದು ಸಾಧ್ಯವಿಲ್ಲ ಅನ್ನುವ ಮಟ್ಟಿಗೆ ಕೆಲ ರಾಷ್ಟ್ರಗಳು ಮಾತಾಡಿಕೊಂಡವು ಆದರೆ ಇವತ್ತು ಅದನ್ನು ಸಾಧಿಸುವ ಹಂತಕ್ಕೆ ತಲುಪಿದ್ದೇವೆ.ಇನ್ನೇನು ಒಂದೆರಡು ವರ್ಷಗಳಲ್ಲಿ ಪೊಲೀಯೋ ಮುಕ್ತ ರಾಷ್ಟ್ರವಾಗಲಿದೆ.
ನಮ್ಮಲ್ಲಿ ಎರಡು ವರ್ಗದ ಜನರಿದ್ದಾರೆ ಒಂದು ವರ್ಗ ಬೆಳಿಗ್ಗೆದ್ದು ಆಹಾರಕ್ಕಾಗಿ ಓಡಾಡುವ ವರ್ಗವಾದರೆ,ಇನ್ನೊಂದು ವರ್ಗ ಆಹಾರವನ್ನು ಕರಗಿಸಿಕೊಳ್ಳಲು ಓಡಾಡುತ್ತಾರೆ. ನಾವು ಎಷ್ಟು ಸಂಪಾದನೆ ಮಾಡಿದ್ದೇವೆ ಅನ್ನೋದು ಮುಖ್ಯವಾಗುವುದಿಲ್ಲ.ಬದಲಾಗಿ ನಾವು ಈ ಸಮಾಜಕ್ಕೆ ಎಷ್ಟು ಸೇವೆಯನ್ನು ನೀಡಿದ್ದೇವೆ ಅನ್ನುವುದು ಮುಖ್ಯ ಎಂದು ಹೇಳಿದರು.
ಕಳಸ ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಶೆಟ್ಟಿ ಮಾತನಾಡಿ ಕಳಸ ಭಾಗದಲ್ಲಿ ರೋಟರಿ ಸಂಸ್ಥೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದು,ಈಗಾಗಲೇ ಹಿರೇಬೈಲು ಗ್ರಾಮಕ್ಕೆ ಸೋಲಾರ್ ದೀಪಗಳನ್ನು ಅಳವಡಿಸಿದೆ.ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.ಸ್ವಚ್ಚತೆ,ಸರ್ಕಾರಿ ಶಾಲೆಯ ಅಭಿವೃದ್ಧಿ,ಸುರಕ್ಷಿತ ವಾಹನ ಚಾಲನೆಯ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಳುಗು ತಜ್ಞ ಭಾಸ್ಕರ್,ಜಿಲ್ಲಾ ಉತ್ತಮ ಶಿಕ್ಷ ಪುರಸ್ಕøತ ಕುಮಾರಚಾರ್ ಇವರನ್ನು ಗೌರವಿಸಲಾಯಿತು.ಜಿ.ಸರಸ್ವತಿ ಜೋಷಿಯವರ ಸವಿನೆನಪಿಗಾಗಿ ರಾಜಗೋಪಾಲ ಜೋಷಿಯವರು ವಿವಿಧ ಶಾಲೆಗಳಿಗೆ ದ್ವನಿವರ್ಧಕವನ್ನು ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಗವರ್ನರ್ ಬಿ.ಸಿ.ಗೀತಾ,ಕಳಸ ರೋಟರಿ ಕಾರ್ಯಧರ್ಶಿ ವಿಕ್ರಮ್ ಪ್ರಭು,ಎನ್.ಎಂ.ಹರ್ಷ,ಅಭಿನಂದನ್ ಬಲ್ಲಾಳ್,ರಾಜಲಕ್ಷ್ಮೀ ಜೋಷಿ,ಕುಮಾರಸ್ವಾಮಿ,ಕೆ.ಕೆ.ಭಾಲಕೃಷ್ಣ ಭಟ್ ಇತರರು ಇದ್ದರು.ಕಳಸ ರೋಟರಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಮುಳುಗು ತಜ್ಞ ಭಾಸ್ಕರ್ ಇವರನ್ನು ಗೌರವಿಸಲಾಯಿತು.
Home ಸ್ಥಳಿಯ ಸುದ್ದಿ ಪ್ರಾರಂಭ ಮಾಡಿದ ಕೆಲಸವನ್ನು ಗುರಿ ಮುಟ್ಟುವ ತನಕ ಮಾಡಿ ಮುಗಿಸುವುದು ರೋಟರಿಯ ಉದ್ದೇಶವಾಗಿದೆ: ಅಭಿನಂದನ್ ಶೆಟ್ಟಿ…