ಬೆಂಗಳೂರು: ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳ ತನಿಖೆ ಅಂತ್ಯವಾಗಿದ್ದು, ಐಟಿ ಅಧಿಕಾರಿಗಳು ಶಿವರಾಜ್‌ಕುಮಾರ್ ಅವರ ಮನೆಯಿಂದ ನಿರ್ಗಮಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್ ಅವರು ನನ್ನ ಮನೆಯ ಮೇಲೆ ಮೊದಲ ಬಾರಿ ಐಟಿ ದಾಳಿ ಆಗಿದೆ. ಐಟಿ ಅಧಿಕಾರಿಗಳು ಯಾಕೆ ದಾಳಿ ಮಾಡಿದರು ಗೊತ್ತಿಲ್ಲ. ಚೆನ್ನೈನಲ್ಲಿ ಇರುವಾರ 1984 ಮತ್ತು 85 ರಲ್ಲೂ ದಾಳಿ ನಡೆದಿತ್ತು. ಐಟಿ ಅಧಿಕಾರಿಗಳು ಅವರ ಡ್ಯೂಟಿ ಅವರು ಮಾಡಿದ್ದಾರೆ. ಐಟಿ ಅಧಿಕಾರಿಗಳು ಸ್ವಲ್ಪ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವರು ವಿಚಾರಣೆಗೆ ಕರೆದರೆ ನಾವು ಹೋಗುತ್ತೇವೆ ಎಂದಿದ್ದಾರೆ.










