ವಿಜಯಪುರ : ಜಾರಕಿಹೊಳಿ ಸಹೋದರರ ಅಸಮಾಧಾನ ವಿಚಾರವಾಗಿ ಮಾಜಿ ಸಚಿವ ಎಂ ಬಿ ಪಾಟೀಲ್ ಮಾತನಾಡಿ ಜಾರಕಿಹೊಳಿ ಸೋದರರು ಬಿಜೆಪಿಗೆ ಹೋಗಲ್ಲ ಕಾಂಗ್ರೆಸ್ ನಲ್ಲೆ ಇರ್ತಾರೆ.ಅವರ ಅಸಮಾಧಾನಕ್ಕೆ ಸ್ಥಳೀಯವಾಗಿ ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಒಂದು ಕುಟುಂಬದಲ್ಲಿ ಗಂಡ-ಹೆಂಡತಿ ಹಾಗೂ ಅಣ್ಣತಮ್ಮಂದಿರ ಮದ್ಯೆ ಇರುವ ಹಾಗೆ ಸಮಸ್ಯೆಗಳು ಇರುತ್ತವೆ ಎಂದ ಅವರು ನಂತರ ಬಿಜೆಪಿಯಿಂದ ಡಿಸಿಎಂ ಮಾಡುವ ಆಮಿಷ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗಲ್ಲ. ಒಂದು ವೇಳೆ ಹೋದ್ರೆ ಅವರು ಡಿಸಿಎಂ ಆಗೋದು ಹಾಗೂ ಬಿಜೆಪಿ ಅಧಿಕಾರಕ್ಕೆ ಬರೋದು ಎರಡೂ ಕನಸಿನ ಮಾತು ಎಂದಿದ್ದಾರೆ.










