ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆ ಮಾಡುವುದಾಗಿ ನಂಬಿಸಿ ಕಿರುತೆರೆ ನಟಿಗೆ ವಂಚನೆ…

409
firstsuddi

ಬೆಂಗಳೂರು : ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ಕಿರುತೆರೆ ನಟಿ ಸುಶ್ಮಿತಾಗೆ ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಅದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿ ರಘು ಚಂದ್ರಪ್ಪ ಹಾಗೂ ಸಂಗೀತ  ನಟಿ  ಸುಶ್ಮಿತಾ ಅವರಿಂದ ಹಣ ಪಡೆದು ವಂಚಿಸಿದ್ದು, ಸುಶ್ಮಿತ ಅಲ್ಲದೆ ಸರೋಜ ಎಂಬುವರಿಗೂ ವಂಚಿಸಲಾಗಿದೆ ತಿಳಿದು ಬಂದಿದ್ದು, ಹಣ ವಾಪಸ್ಸು ಕೇಳಿದರೆ ರಘು ಚಂದ್ರಪ್ಪ ಎಂಬಾತ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸುಶ್ಮಿತಾ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರುನೀಡಿದ್ದು. ಐಪಿಸಿ 420,418, ಹಾಗೂ 506 ಸೆಕ್ಷನ್ ಆಡಿಯಲ್ಲಿ ಪ್ರಕರಣ ದಾಖಲಾಗಿದೆ.