ಚಿಕ್ಕಮಗಳೂರಿನ ಮಲೆನಾಡು ಭಾಗದ ಕೆಲವೆಡೆ ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಕಳಸ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ವರುಣನ ರೌದ್ರ ನರ್ತನ ಮುಂದುವರೆದಿದ್ರೆ, ಕಳೆದ ಮೂರು ದಿನಗಳಿಂದ ಭಾರೀ ಮಳೆಯಿಂದ ಕಂಗಾಲಾಗಿದ್ದ ಎನ್.ಆರ್.ಪುರ, ಕೊಪ್ಪ, ಮೂಡಿಗೆರೆಯಲ್ಲಿ ಸಾಧಾರಣ ಮಳೆಯಾಗ್ತಿದೆ. ಮಲೆನಾಡು ಭಾಗದಲ್ಲಿ ನಿನ್ನೆ ಇಡೀ ದಿನ ಬಿಟ್ಟು-ಬಿಟ್ಟು ಸುರಿದ ವರುಣ ಕಳೆದ ರಾತ್ರಿ ಧಾರಾಕಾರವಾಗಿ ಸುರಿದಿದ್ದಾನೆ. ಶೃಂಗೇರಿ, ಕುದುರೆಮುಖ, ಕಳಸಾದ ಮಳೆಗೆ ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಮೃದ್ಧ ಮಳೆ ನೋಡದ ಮಲೆನಾಡಿಗರು ಇದೀಗ ಈ ಭಾರೀ ಮಳೆಗೆ ಮಲೆನಾಡಿನ ಹೊಲ-ಗದ್ದೆಗಳು ಜಲಾವೃತಗೊಂಡು, ಕಾಫಿ, ಮೆಣಸು, ಅಡಿಕೆ ಕೊಳೆ ರೋಗದ ಭೀತಿ ಶುರುವಾಗಿರೋದ್ರಿಂದ ಮಲೆನಾಡಿನ ಆತಂಕದಲ್ಲಿದ್ದಾರೆ. ಕಳೆದ ಎಂಟತ್ತು ವರ್ಷಗಳಲ್ಲೇ ತುಂಬಾದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ರೆ, ಬಾಳೆಹೊನ್ನೂರಿನ ಮಹಲ್ಗೋಡು, ಕೆಲಸ ಸೇತುವೆಗಳು ಏಳು ಬಾರಿ ಜಲಾವೃತಗೊಂಡಿದ್ರೆ, ಕಳಸ ಹೊರನಾಡು ಮಾರ್ಗದ ಮಾರ್ಗದ ಹೆಬ್ಬಾಳೆ ಸೇತುವೆ ಐದು ಬಾರಿ ಮುಳುಗಡೆಯಾಗಿದೆ. ಆದ್ರು ಈ ಭಾಗದಲ್ಲಿ ವರುಣನ ಅಬ್ಬರ ತಗ್ಗಿಲ್ಲ. ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.