ಕಳಸ:ಸವಿತಾ ಸಮಾಜ ಮತ್ತು ಸಾಧನಾ ಮಹಿಳಾ ಭಂಡಾರಿ ಸಂಘದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ…

424
firstsuddi

ಕಳಸ:ಇಲ್ಲಿಯ ಸವಿತಾ ಸಮಾಜ ಮತ್ತು ಸಾಧನಾ ಮಹಿಳಾ ಭಂಡಾರಿ ಸಂಘ ಕಳಸ ಇದರ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಅದ್ದೂರಿಯಾಗಿ ನಡೆಸಲಾಯಿತು.
ಸವಿತಾ ಮಹರ್ಷಿ ಜಯಂತೋತ್ಸವದ ಅಂಗವಾಗಿ ಬೆಳಿಗ್ಗೆ ಸಿಂಗಾರಗೊಳಿಸಿದ ತೆರೆದ ವಾಹನದಲ್ಲಿ ಸವಿತಾ ಮಹರ್ಷಿಯ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು. ಪಟ್ಟಣದ ದುರ್ಗಾ ಮಂಟಪದಿಂದ ಹೊರಟ ಮೆರವಣಿಗೆಯು ಮಹಾವೀರ ರಸ್ತೆ ಹಾಗೂ ರಾಜಬೀದಿಯಲ್ಲಿ ಸಾಗಿ ಕಲಸೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯನ್ನು ನಡೆಸಲಾಯಿತು.
ಮೆರವಣಿಗೆಯುದ್ದಕ್ಕೂ ಕೇರಳ ಶೈಲಿಯ ಸಿಂಗಾರ ಮೇಳ,ವಾದನ ಹಾಗೂ ನೃತ್ಯ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.ಸವಿತಾ ಸಮಾಜದ ನೂರಾರು ಭಾಂದವರು ಶ್ವೇತ ವರ್ಣ ವಸ್ತ್ರವನ್ನು ದರಿಸಿ ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು.ಮೆರವಣಿಗೆಯ ನಂತರ ಬಿಂದು ಮಾಧವ ದೇವಸ್ಥಾನದ ಸಮೀಪ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿ ಅನ್ನ ಸಂತರ್ಪಣೆ ನಡೆಸಲಾಯಿತು.