ಬೆಂಗಳೂರು – ತಮಿಳು ಚಿತ್ರರಂಗದ ಖ್ಯಾತನಟರಾದ ಕಮಲ್ ಹಾಸನ್ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಎರಡು ರಾಜ್ಯದ ತಲೆನೋವಾಗಿರುವ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಬಗ್ಗೆ ಪ್ರಾಸ್ತಾಪಿಸಿದ್ದು, ಎರಡು ರಾಜ್ಯದÀ ರೈತರ ಹಿತವನ್ನು ಮನದಲ್ಲಿರಿಸಿ ಸಮಸ್ಯೆ ಬಗೆ ಹರಿಸುವ ಬಗ್ಗೆ ಚರ್ಚಿಸಲಾಯಿತು. ಸಮಸ್ಯೆ ಬಗ್ಗೆ ತಮಿಳುನಾಡು ಸರ್ಕಾರ ಮಾತಾನಾಡಲು ಮುಂದೆ ಬಂದರೆ ತಾನು ಮಾತಾನಾಡಲು ಸಿದ್ದ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ನನಗೆ ಎರಡು ರಾಜ್ಯದ ರೈತರ ಸಂಕಷ್ಟ ತಿಳಿದಿದ್ದು, ನಾನು ಇಲ್ಲಿ ನಟನಾಗಿಯೂ, ರಾಜಕರಣಿಯಾಗಿಯೂ ಬಂದಿಲ್ಲ. ಎರಡು ರಾಜ್ಯಗಳ ನಡುವಿನ ಸೇತುವೆಯಾಗಿ ಬಂದಿದ್ದೇನೆ. ಮುಖ್ಯಮಂತ್ರಿಯವರು ಉತ್ತಮವಾಗಿ ಪ್ರತಿಕ್ರಯಿಸಿದ್ದಾರೆ ಎಂದು ತಿಳಿಸಿದರು.