12ಗಂಟೆ ಕೇರಳ ಬಂದ್, ಹಲವೆಡೆ ಸೆಕ್ಷನ್ 144 ಜಾರಿ…

285
firstsuddi

ಕೇರಳ: ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಿನ್ನೆಯಿಂದ ಆರಂಭಗೊಂಡಿರುವ ಅಯ್ಯಪ್ಪ ಸ್ವಾಮಿಯ ಭಕ್ತರ ಪ್ರತಿಭಟನೆ ಇಂದೂ ಮುಂದುವರೆದಿದ್ದು, ಶಬರಿಮಲೆ ರಕ್ಷಣಾ ಸಮಿತಿ 12ಗಂಟೆಗಳ ಕಾಲ ಕೇರಳ ಬಂದ್ ಗೆ ಕರೆ ನೀಡಿದ್ದು, ಸನ್ನಿಧಾನಂ, ಪಂಪಾ, ನೀಲಕ್ಕಲ್ ಹಾಗೂ ಎಲವುಂಗಲ್ನಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿಯಾಗಿದೆ. ಪಂಪಾ, ನೀಲಕ್ಕಲ್ ಗ್ರಾಮಗಳು ಸೇರಿದಂತೆ ಶಬರಿಮಲೆಗೆ ತೆರಳುವ ಮಾರ್ಗವು ಅಕ್ಷರಶಃ ರಣಾಂಗಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೂ ಪ್ರತಿಭಟನಾಕಾರರು ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ತಡೆದಿದ್ದು, ಪಂಪಾ ಮತ್ತು ನೀಲಕ್ಕಲ್ ಪ್ರದೇಶದಲ್ಲಿ 700 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.