ರಾಜವಂಶಸ್ಥ ಯದುವೀರ ಕೃಷ್ಣದತ್ತರಿಂದ ಆಯುಧ ಪೂಜೆ…

381
firstsuddi

ಮೈಸೂರು- ನವರಾತ್ರಿಯ ಅಂತಿಮ ದಿನವಾದ ಇಂದು ನಗರದ ಅರಮನೆಯಲ್ಲಿ ಆಯುಧ ಪೂಜೆ ವಿಶೇಷವಾಗಿ ಆಚರಿಸಲಾಗಿದ್ದು, ಬೆಳಗ್ಗೆ ಗಣಪತಿ ಪೂಜೆ ನಂತರ ಚಂಡಿಕಾ ಹೋಮ ನೆರವೇರಿಸಿದ್ದು, ಕಲ್ಯಾಣ ಮಂಟದಲ್ಲಿ ರಾಜರ ಕಾಲದಲ್ಲಿ ಬಳಸಲಾಗುತ್ತಿದ್ದ ಪಟ್ಟದ ಕತ್ತಿ, ಗುರಾಣಿ, ಖಡ್ಗ ಸೇರಿದಂತೆ ಇತರೆ ಯುದ್ಧೋಪಕರಣಗಳಿಗೆ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ವಿಧಿವತ್ತಾಗಿ ಪೂಜೆ ಸಲ್ಲಿಸಿದರು.ಇದಾದ ನಂತರ  ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಆನೆಗಳಿಗೆ ಯದುವೀರರು ಪೂಜೆ ಸಲ್ಲಿಸಿ ಪುಷ್ಪ ನಮನ ಮಾಡಿದರು. ನಂತರ ವಾಹನಗಳಿಗೆ ಅರಮನೆ ಆವರಣದಲ್ಲಿ ಜೋಡಿಸಲಾಗಿರುವ ಫಿರಂಗಿ ಗಾಡಿಗಳಿಗೂ ಪೂಜೆ ನೆರವೇರಿಸಿದರು.