ಹೆಂಗಳೆಯರ ಮನಸೂರೆಗೊಳ್ಳುವ ಕಂಟೆಪರರಿ ಆಕ್ಸಿಡೈಜ್ಡ್ ಸಿಲ್ವರ್ ಆಭರಣಗಳು…

629
firstsuddi
  •  ರಾಘವೇಂದ್ರ ಕೆಸವಳಲು

ಪ್ರಸ್ತುತ ಮಾರುಕಟ್ಟೆಯಲ್ಲಿ ಅದ್ಭುತ ಟ್ರೈಬಲ್ ವಿನ್ಯಾಸದ ಟ್ರೆಂಡಿ ಆಭರಣಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ. ಒಂದು ಕಾಲದಲ್ಲಿ ಒಡವೆಗಳೆಂದರೆ ಚಿನ್ನ,ಬೆಳ್ಳಿಯಿಂದ ಮಾತ್ರ ಮೂಡಿದ್ದಾಗಿರುತ್ತಿದ್ದವು ಆದರೆ ಇಂದು ಕಾಲ ಕಳೆದಂತೆಲ್ಲಾ ಫ್ಯಾಶನ್ ಲೋಕದ ಮಜಲುಗಳು ಸವಿಸ್ತಾರಗೊಂಡಿವೆ. ಆಧುನೀಕತೆಯ ಮೆರಗಿನೊಂದಿಗೆ ವಿನ್ಯಾಸಗೊಳ್ಳುತ್ತಿರುವ ಈ ಆಕ್ಸಿಡೈಜ್ಡ್ ಆಭರಣಗಳು ಕಾಲೇಜ್ ಯುವತಿಯರಿಂದ ಹಿಡಿದು ಎಲ್ಲಾ ವಯಸ್ಸಿನ ವಿವಾಹಿತ ಮಹಿಳೆಯರ ನೆಚ್ಚಿನ ಸಂಗ್ರಹದಲ್ಲಿ ಪಾಲು ಪಡೆದುಕೊಂಡಿವೆ. ಮಾಡರ್ನ್ ಹಾಗೂ ಸಾಂಪ್ರದಾಯಿಕ ಉಡುಗೆಗಳ ಮೆರುಗನ್ನು ಅದ್ಭುತಗೊಳಿಸುವ ಟ್ರೈಬಲ್ ಇಯರ್ ರಿಂಗ್ ಹಾಗೂ ಸ್ಟಡ್ ಗಳು, ನೆಕ್ಲೇಸ್,ಬಳೆಗಳು, ಮತ್ತು ಟ್ರೆಂಡಿ ಕಾಲುಗೆಜ್ಜೆಗಳು, ನೀರೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ತಮ್ಮದೇ ಪಾತ್ರವಹಿಸಿವೆ.

ಇನ್ನೂ ಈ ಅಭರಣಗಳು ಕೆಲವು ಲೋಹಗಳ ಮಿಶ್ರಣವಾಗಿದ್ದು,ಬೆಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಬೆರಸುವುದರಿಂದ ದುಬಾರಿ ಕೂಡ ಅಲ್ಲ. ಎಲ್ಲಾ ವರ್ಗದ ಮಹಿಳೆಯರ ಕೈಗೆಟಕುವಂತಿರುವ ಇವುಗಳ ಉಪಯೋಗ ಹಾಗೂ ನಿರ್ವಹಣೆ ಕೂಡ ಬಹಳ ಸುಲಭ. ವಿಭಿನ್ನ ಹರಳುಗಳೊಂದಿಗೆ ಎನಾಮಲ್ ನೊಂದಿಗೆ ಕಂಗೊಳಿಸುವ ಈ ಆಭರಣಗಳು ಹಿಂದೆಂದಿಗಿಂತಲೂ ಜನಪ್ರಿಯವಾಗಿರುವುದು ಅವುಗಳಲ್ಲಿನ ಅನಿಯಮಿತ ವಿನ್ಯಾಸಗಳಿಂದಾಗಿ.