ಐಟಿ ಅಧಿಕಾರಿಗಳ ವಿಚಾರಣೆ ಬಳಿಕ ಕಿಚ್ಚ ಸುದೀಪ್ ಹೇಳಿದ್ದೇನು..?

256
firstsuddi

ಬೆಂಗಳೂರು: ನಟ ಸುದೀಪ್  ಅವರ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಅವರು ಇಂದು  ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಹಾಜರಾಗಿದ್ದರು. ವಿಚಾರಣೆ  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ತಪ್ಪುಗಳನ್ನು  ಸರಿಪಡಿಸಿಕೊಳ್ಳಲು ಇದೊಂದು  ಎಚ್ಚರಿಕೆ. ಐಟಿ ದಾಳಿ ನಡೆದಾಗ ‘ಪೈಲ್ವಾನ್’ ಶೂಟಿಂಗ್ ನಡೆಯುತ್ತಿತ್ತು. ಅದನ್ನ ಬಿಟ್ಟು ಬಂದಿದ್ದೆ.  ಇಂದು ‘ಸೈರಾ’ ಶೂಟಿಂಗ್ ಇತ್ತು. ಆದರೆ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಇಂದಿನ ವಿಚಾರಣೆ ಮುಗಿಯಿತು. ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ನಾನು ಬರುತ್ತೇನೆ. ಇನ್ನೂ ಐದು, ಆರು  6 ತಿಂಗಳು ವಿಚಾರಣೆ ನಡೆಯುತ್ತದೆ ಎಂದಿದ್ದಾರೆ. ಬೇರೆ ನಟರು ಹೇಳಿಕೆ ಕೊಡಲು ಹಿಂಜರಿದ ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿದ ಅವರು ಬೇರೆಯವರಿಗೆ ಏನು ಸಮಸ್ಯೆ ಆಗಿದೆ ನನಗೆ ಗೊತ್ತಿಲ್ಲ.ಅವರ ಸ್ಥಾನದಲ್ಲಿ ನಾನು ನಿಂತು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ .