ಕೊಪ್ಪ: ಆಕಸ್ಮಿಕ ಬೆಂಕಿಗೆ ಮನೆ ಸುಟ್ಟು ಭಸ್ಮ…

266
firstsuddi

ಚಿಕ್ಕಮಗಳೂರು : ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರು ಗ್ರಾಮದಲ್ಲಿ ನಡೆದಿದೆ . ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಮನೆಯಲ್ಲಿದ್ದ ಪೀಠೋಪಕರಣಗಳು, ಅಕ್ಕಿ, ಅಡಿಕೆ, ಬಟ್ಟೆಗಳು, ಬಂಗಾರದ ತಾಳಿ ಸರ ಸೇರಿದಂತೆ ಸುಮಾರು ಮೂರುವರೆ ಲಕ್ಷ ಮೌಲ್ಯದ ವಸ್ತುಗಳು  ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.